Site icon PowerTV

ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ರಾಜಕೀಯ ಕೈವಾಡ : ನಳೀನ್​ ಕಮಾರ್ ಕಟೀಲು

ಹುಬ್ಬಳ್ಳಿ : ಕೆ.ಜಿ ಹಳ್ಳಿ ಘಟನೆಯಲ್ಲಿ ಸರ್ಕಾರಿ ಆಸ್ತಿ ಪಾಸ್ತಿಗಳನ್ನು ಹಾನಿ ಮಾಡಲಾಗಿದೆ, ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಮೇಲೆ ಕಠಿಣ ಕ್ರಮಗೈಗೊಳ್ಳಬೇಕು. ಇದು ರಾಜಕೀಯ ಹುನ್ನಾರ, ರಾಜ್ಯದಲ್ಲಿ ಗಲಭೆ ಎಬ್ಬಿಸುವ ಅರಾಜಕತೆ ಸೃಷ್ಟಿಸಲು ಹುನ್ನಾರ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲು ಹೇಳಿದ್ದಾರೆ. 

ಕೆ.ಜಿ  ಹಳ್ಳಿ ಗಲಭೆ  : ಕಠಿಣ ಕ್ರಮಕ್ಕೆ ಸಿಎಂ ಖಡಕ್ ಸೂಚನೆ

ಈ ಘಟನೆಯಲ್ಲಿ ಕಾಣದ ಶಕ್ತಿಗಳು ಕೆಲಸ ಮಾಡ್ತಿವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಆದ್ದರಿಂದ ಅರಾಜಕತೆ ಸೃಷ್ಟಿಸಿ, ದಾಂಧಲೆ ಮಾಡಬೇಕೆಂದು ಮುಂದಾಗಿದ್ದಾರೆ. ಘಟನೆ ಹಿಂದಿರುವ ಕಾಣದ ಶಕ್ತಿಗಳು ಯಾವುದು, ಎಸ್​ಡಿಪಿಐ, ಕೆಎಫ್​ಡಿ ಸಂಘಟನೆಗಳು ರಾಜ್ಯದಲ್ಲಿ ಹಿಂದೆಯು ಗಲಭೆಗೆ ಪ್ರಚೋದನೆ ನೀಡಿವೆ. ಸಿಎಎ ಹೋರಾಟದಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ರಾಜ್ಯಕ್ಕೆ ಬೆಂಕಿ ಹಚ್ಚುತ್ತೇವೆಂದು ಹಿಂದೆ ಪ್ರಚೋದನೆ ನೀಡಿದ್ರು.ಈ ಘಟನೆಯಲ್ಲು ರಾಜಕೀಯ ಹುನ್ನಾರ ಅಡಗಿದೆ ಎಂದರು.

ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಪೋಸ್ಟ್​ ; ಹೊತ್ತಿ ಉರಿದ  ಬೆಂಗಳೂರಿನ ಕೆ.ಜಿ ಹಳ್ಳಿ , ಡಿ.ಜೆ ಹಳ್ಳಿ..!

Exit mobile version