Site icon PowerTV

UPSC ಪರೀಕ್ಷೆಯಲ್ಲಿ ರಾಂಕ್​ಗಳಿಸಿದ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಸನ್ಮಾನ

ಶಿವಮೊಗ್ಗ : ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ರಾಂಕ್​ಗಳಿಸಿ ಜಿಲ್ಲೆಗೆ ಕೀರ್ತಿ ತಂದಿರುವ ಶಿವಮೊಗ್ಗದ ಪೃಥ್ವಿ ಹಾಗೂ ಜಿ.ಎಸ್. ಚಂದನ್ ಗೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸನ್ಮಾನಿಸಿ, ಶುಭ ಹಾರೈಸಿದೆ. ಇಂದು ಪಕ್ಷದ ಕಚೇರಿಯಲ್ಲಿ, ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ 582 ನೇ ರಾಂಕ್​​ಗಳಿಸಿದ ಪೃಥ್ವಿ ಮತ್ತು 777 ನೇ ರಾಂಕ್​ಗಳಿಸಿದ ಜಿ.ಎಸ್. ಚಂದನ್ ಅವರನ್ನು ಸನ್ಮಾನಿಸಲಾಯಿತು. ರಾಂಕ್​ ಪಡೆಯುವುದರೊಂದಿಗೆ, ಜಿಲ್ಲೆಗೆ ಕೀರ್ತಿ ತಂದಿದ್ದು, ಇವರಿಗೆ ಉನ್ನತ ಹುದ್ದೆ ಸಿಕ್ಕಿ ಬಡವರ ಸೇವೆ ಮಾಡಲಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹಾರೈಸಿದ್ರು. ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ  ವಿದ್ಯಾರ್ಥಿ ಪೃಥ್ವಿ, ನನ್ನ ಪ್ರಯತ್ನ ನಾನು ಮಾಡಿದ್ದೇನೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಬಹಳ ಸಂತಸವಾಗಿದೆ. ರಾಜ್ಯಕ್ಕಿಂತ ಬೇರೆ ರಾಜ್ಯದ ವಿದ್ಯಾರ್ಥಿಗಳು ಅತೀ ಹೆಚ್ಚು ಯು.ಪಿ.ಎಸ್.ಸಿ ಪರೀಕ್ಷೆ ಪಾಸಾಗಿದ್ದಾರೆ. ನನ್ನಿಂದ ಬೇರೆ ವಿದ್ಯಾರ್ಥಿಗಳಿಗೂ ಪ್ರೇರಕವಾಗಲಿ ಎಂಬುದೇ ನನ್ನಾಸೆ ಅಂತಿದ್ದಾರೆ ಪೃಥ್ವಿ.

Exit mobile version