Site icon PowerTV

ಗುಡಿಸಿಲಿನಲ್ಲಿದ್ದುಕೊಂಡೇ SSLC ವಿದ್ಯಾರ್ಥಿಯ ಸಾಧನೆ..!

ಬೆಂಗಳೂರು : ಸಾಧಿಸುವ ಛಲ ಇದ್ದರೆ ಅದೆಂತಹ ಕಷ್ಟ ಬದ್ರು ಸಾಧಿಸಬಹುದು ಅಂತ ವಿದ್ಯಾರ್ಥಿಯೊಬ್ಬ ಪ್ರೂವ್ ಮಾಡಿದ್ದಾನೆ. ಯಾದಗಿರಿಯಿಂದ ಬೆಂಗಳೂರಿಗೆ ಗುಳೆ ಬಂದಿರೋ ಮಹೇಶ್ ಅನ್ನೋ ಬಾಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಕ್ಕೆ 616 ಅಂಕಗಳಿಸಿ ಸಾಧನೆ ಮಾಡಿದ್ದಾನೆ.

ಕೂರಲು ಮಲಗಲು ಸ್ಥಳವಿಲ್ಲದ ಗುಡಿಸಿಲಿನಲ್ಲಿ ವಾಸಿಸುತ್ತಾ ಮಹೇಶ ಮಾಡಿದ ಸಾಧನೆಯನ್ನು ಅರಿತ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿ ಇರುವ ಗುಡಿಸಲು ಮನೆಗೆ ಭೇಟಿ ನೀಡಿ ಸನ್ಮಾನಿಸಿದ್ದಾರೆ. ಜೊತೆಗೆ 5 ಸಾವಿರ ಸಹಾಯ ಧನ ನೀಡಿ ಮುಂದಿನ ಉತ್ತಮ ಭವಿಷ್ಯಕ್ಕೆ ಸಹಾಯ ಮಾಡೋದಾಗಿ ಭರವಸೆ ನೀಡಿದ್ರು.

Exit mobile version