Site icon PowerTV

ವಿವಿಧ ಬೇಡಿಕೆಗಳಿಗೆ ಆಗ್ರಹ – ಬಿಸಿಯೂಟ ನೌಕರರ ಉಪವಾಸ ಸತ್ಯಾಗ್ರಹ ಆರಂಭ

ಶಿವಮೊಗ್ಗ : ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಬಿಸಿಯೂಟ ನೌಕರರು ಇಂದಿನಿಂದ ಅನಿರ್ಧಿಷ್ಟ ಕಾಲದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಜಿ.ಪಂ ಮುಂಭಾಗ ಇಂದಿನಿಂದ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದ್ದು, ರಾಜ್ಯದಲ್ಲಿ ಸುಮಾರು 1.17 ಲಕ್ಷ ಬಿಸಿಯೂಟ ನೌಕರರು ಕಳೆದ 19 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಬಡ ಮಹಿಳೆಯರು, ವಿಧವೆಯರು, ವಿಚ್ಚೇದಿತರು ಹೆಚ್ಚಾಗಿದ್ದು, ಈ ಉದ್ಯೋಗವನ್ನೆ ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ, ಕಳೆದ ನಾಲ್ಕೈದು ತಿಂಗಳಿಂದ ಯಾವುದೇ ಆದಾಯ ಇಲ್ಲದೇ ಅತ್ಯಂತ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ನೌಕರರು ಆರೋಪಿಸಿದ್ರು.

ಕೊರೋನಾದ ಹಿನ್ನಲೆಯಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಬಿಸಿಯೂಟವೂ ಇಲ್ಲವಾಗಿದೆ. ಕೆಲವು ಜಿಲ್ಲೆಗಳಲ್ಲಿ ನೌಕರರೇ ಆಹಾರವನ್ನು ಮಕ್ಕಳ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಶಾಲೆ ಮುಚ್ಚಿದ್ದರೂ ಶಾಲಾ ಶಿಕ್ಷಕರಿಗೆ ವೇತನ ನೀಡುತ್ತಿದೆ. ಆದರೆ ನಮಗೆ ಮಾತ್ರ ಯಾವ ವೇತನವೂ ಇಲ್ಲ. ವಿಶೇಷ ಪ್ಯಾಕೇಜ್ ಕೂಡ ಇಲ್ಲ ಎಂದು ಆರೋಪಿಸಿದರು. ಬಿಸಿಯೂಟ ನೌಕರರಿಗೆ ಶಾಲೆ ಆರಂಭವಾಗುವವರೆಗೂ ವೇತನ ನೀಡಬೇಕು, ಕನಿಷ್ಟ 6 ತಿಂಗಳಿಗೆ ಆಗುವಷ್ಟು ಪಡಿತರ ಒದಗಿಸಬೇಕು, ಲಾಕ್‍ಡೌನ್ ಅವಧಿಯಲ್ಲಿ ತಿಂಗಳಿಗೆ 7500ರೂ ವೇತನ ನೀಡಬೇಕು, ಪೆನ್ಷನ್ ನೀಡಬೇಕು. ಅಕಸ್ಮಾತ್ ಕೋವಿಡ್ ಸೋಂಕಿತರಾದರೆ ಅದರ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಮತ್ತು ನಮ್ಮನ್ನು ಖಾಯಂಗೊಳಿಸಬೇಕು ಎಂದು ಬಿಸಿಯೂಟ ನೌಕರರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Exit mobile version