Site icon PowerTV

ಕೊರೋನಾ ಗೆದ್ದು ಬಂದ 110 ರ ವೃದ್ದೆಗೆ ಜಿಲ್ಲಾ ಪೊಲೀಸ್ ಅಭಿನಂದನೆ

ಚಿತ್ರದುರ್ಗ: ನಗರದ ಡಿ.ಎ.ಆರ್ ಕ್ವಾಟ್ರಸ್​ನಲ್ಲಿ ವಾಸವಾಗಿರೋ 110 ವಯಸ್ಸಿನ ಸಿದ್ದಮ್ಮ ನವರು ಕೆಳೆದ ತಿಂಗಳು 27 ರಂದು ಕೊರೋನಾ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಕೊವಿಡ್​ಗೆ ಗುರಿಯಾಗಿದ್ದರು.ಟೆಸ್ಟ್​ನಲ್ಲಿ ಪಾಸಿಟಿವ್ ಬಂದ ಕಾರಣ ಕಳೆದ ತಿಂಗಳು 27ಕ್ಕೆ ಕೊವಿಡ್ ಸೆಂಟರ್​ನಲ್ಲಿ ದಾಖಲು ಆಗಿದ್ದರು.ಆದ್ರೆ ಕೇವಲ 6 ದಿನಗಳಲ್ಲಿ ಕೊರೋನಾ ಗೆದ್ದು ಗುಣಮುಖರಾಗಿದ್ದರು.

ಇಳಿ ವಯಸ್ಸಿನಲ್ಲಿಯೂ ಕೂಡ ಹೆದರದೆ ಚಿಕಿತ್ಸೆ ಪಡೆದು ಗುಣಮುಖವಾಗಿರುವ ಈ ಅಜ್ಜಿ ಸಿದ್ದಮ್ಮ ಎಲ್ಲಾರಿಗೂ ಮಾದರಿಯಾಗಿದ್ದಾರೆ.ಪೋಲಿಸ್ ಕ್ವಾಟ್ರಸ್​ನಲ್ಲಿ ವಾಸವಿದ್ದ ಸಿದ್ದಮ್ಮನವರನ್ನು ಚಿತ್ರದುರ್ಗ ಪೋಲಿಸ್ ವರಿಷ್ಟಾಧಿಕಾರಿ ಜಿ ರಾಧಿಕಾ ಹಾಗೂ ಜಿಲ್ಲಾ ಪೊಲೀಸ್ ವತಿಯಿಂದ ಕೊರೋನಾ ಸೋಂಕನ್ನು ಗೆದ್ದುಬಂದ 110 ವರ್ಷದ ಅಜ್ಜಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೂ ಇದೇ ವೇಳೆ ಪೊಲೀಸ್ ಸಿಬ್ಬಂದಿಗಳಿಗೆ ಮಾನ್ಯ ಎಸ್ಪಿ ಮೇಡಂ ಕೊವಿಡ್-19 ಸೋಂಕಿನ ಕುರಿತು ಸಿಬ್ಬಂದಿಗೆ ಜಾಗೃತಿಯನ್ನು ಮೂಡಿಸಿದರು.

Exit mobile version