Site icon PowerTV

ಅನಾಥ ಶವಗಳ ಸಂಸ್ಕಾರ : ಸಾರ್ವಜನಿಕರ ಮೆಚ್ಚುಗೆ ಪಡೆದ ಪೇದೆ

ತುಮಕೂರು: ಜಿಲ್ಲೆಯ ಶಿರಾ ನಗರ ಪೊಲೀಸ್ ಠಾಣೆ ಪೇದೆ ಮಲ್ಲಿಕಾರ್ಜುನ ಅನಾಥ ಶವಗಳ ಸಂಸ್ಕಾರ ಕಾರ್ಯ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದುವರೆಗೂ 32 ಅನಾಥ ಶವಗಳ ಅಂತ್ಯ ಸಂಸ್ಕಾರ ಮಾಡಿರುವ ಪೇದೆ ಮಲ್ಲಿಕಾರ್ಜುನ್. ಇನ್ನೂ ಆಗಸ್ಟ್ 07 ರಂದು ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅನಾಥ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ವ್ಯಕ್ತಿ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ರು. ವಿಷಯ ತಿಳಿದ ಪೇದೆ ಮಲ್ಲಿಕಾರ್ಜುನ್ ನಗರಸಭೆ ನೆರವಿನೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಪೇದೆ ಮಲ್ಲಿಕಾರ್ಜುನರ ಈ ಸೇವೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೇಮಂತ್ ಕುಮಾರ್

Exit mobile version