Site icon PowerTV

ಇಷ್ಟವಾದುದನ್ನೇ ಕಲಿಯಿರಿ : ನೂತನ ಶಿಕ್ಷಣ ನೀತಿ, ಉನ್ನತ ಶಿಕ್ಷಣದ ಬಗ್ಗೆ ಮೋದಿ ಮಾತು

ನವದೆಹಲಿ :  ತಮಗೆ ಇಷ್ಟವಾದುದನ್ನೇ ಕಲಿಯಿರಿ ಅಂತ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಉನ್ನತ ಶಿಕ್ಷಣ ಪರಿವರ್ತನೆಯ ಸುಧಾರಣೆಗಳ ಕುರಿತ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ನೀತಿ ಸ್ಪಷ್ಟವಾಗುತ್ತಿದ್ದಂತೆ ಅದರ ಅನುಷ್ಠಾನ ಕೂಡ ಖಚಿತವಾಗುತ್ತದೆ. ಆ ಬಗ್ಗೆ ಯಾವ ಆಕ್ಷೇಪಗಳು ವ್ಯಕ್ತವಾಗುವುದಿಲ್ಲ. ಆ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ವಿಚಾರದಲ್ಲಿ ಜಗತ್ತಿಗೆ ವಿಸ್ತ್ರತವಾದ ತಿಳುವಳಿಕೆ ಈ ಸಮಾವೇಶದಿಂದ ಸಿಗಲಿದೆ ಎಂದರು.

ಕಳೆದ 3-4 ವರ್ಷಗಳ ಕಾಲ ಸುದೀರ್ಘ ಚರ್ಚೆ, ಲಕ್ಷಾಂತರ ಸಲಹೆ ಸೂಚನೆಗಳನ್ನು ಪರಿಶೀಲಿಸಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಭಾರತದ ಶಿಕ್ಷಣ ನೀತಿಯ ಬಗ್ಗೆ ಜಗತ್ತು ಮಾತನಾಡಲಾರಂಭಿಸಿದೆ.  ದೊಡ್ಡ ಸುಧಾರಣಾ ವ್ಯವಸ್ಥೆಯಲ್ಲಿ  ಶಿಕ್ಷಣ ನೀತಿ ಬುನಾದಿಯಾಗುತ್ತದೆ. ಈ ನೀತಿ ಹಾಲಿ ಮತ್ತು ಭವಿಷ್ಯದ ತಲೆಮಾರನ್ನು ಭವಿಷ್ಯಕ್ಕೆ ಸಿದ್ದವಾಗಿರುವಂತೆ ಮಾಡುತ್ತದೆ  ಎಂದು ಹೇಳಿದರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ತನಗೆ ಇಷ್ಟವಾದುದನ್ನೇ ಕಲಿಯಬೇಕು. ಹಲವು ವಿಷಯಗಳ ಕೋರ್ಸ್ ಹಾಗೂ ಮಲ್ಪಿಪಲ್ ಎಂಟ್ರಿ ಹಾಗೂ ಎಕ್ಸಿಟ್ ಆಯ್ಕೆಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿವೆ. ಯಾವಾಗ ಬೇಕಾದರೂ ವಿದ್ಯಾರ್ಥಿಗಳು ಕೋರ್ಸ್​ ಬಿಡಬಹುದು. ಬೇಕಾದ್ದನ್ನು ಮಾತ್ರವೇ ಕಲಿಯಬಹುದು ಎಂದು ತಿಳಿಸಿದರು.

Exit mobile version