Site icon PowerTV

ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ | 32 ಸೆಕೆಂಡ್​ಗಳೊಳಗೆ ಭೂಮಿಪೂಜೆ

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಭೂಮಿ ಪೂಜೆಗೆ ಕ್ಷಣಗಣನೆ ಶುರುವಾಗಿದೆ. ಅಯೋಧ್ಯೆ ನಗರಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದು, ಮಧ್ಯಾಹ್ನ 12.40ಕ್ಕೆ  ಪ್ರಧಾನಿ ನರೇಂದ್ರ ಮೋದಿ ಮಂದಿರಕ್ಕೆ ಅಡಿಪಾಯ ಹಾಕಲಿದ್ದಾರೆ. ಅಭಿಜಿನ್ ಲಗ್ನದಲ್ಲಿ ಈ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದ್ದು, 40 ಕೆ.ಜಿ  ತೂಕದ ಬೆಳ್ಳಿ ಇಟ್ಟಿಗೆ ಇಡುವ ಮೂಲಕ ಪ್ರಧಾನಿ ರಾಮಮಂದಿರಕ್ಕೆ ಅಡಿಪಾಯವನ್ನು ಹಾಕಲಿದ್ದಾರೆ.  

ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಿ ಜೊತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿಬೆನ್​ ಪಟೇಲ್, ಆರ್ ಎಸ್​ ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಶ್ರೀರಾಮ ಟ್ರಸ್ಟ್​​​​​​​ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ ದಾಸ್ ಭಾಗಿಯಾಗಲಿದ್ದಾರೆ.

32 ಸೆಕೆಂಡ್​ಗಳೊಳಗೆ ಭೂಮಿಪೂಜೆ : ಭೂಮಿಪೂಜೆ ಕೇವಲ 32 ಸೆಕೆಂಡಿನೊಳಗೆ ನೆರವೇರಲಿದೆ. ಮಧ್ಯಾಹ್ನ 12.44 ನಿಮಿಷ 8 ಸೆಕೆಂಡಿಗೆ ಮುಹೂರ್ತ ಆರಂಭವಾಗಲಿದ್ದು,12 ಗಂಟೆ 44 ನಿಮಿಷ 44 ಸೆಕೆಂಡಿಗೆ ಮುಹೂರ್ತ ಪೂರ್ಣವಾಗಲಿದೆಯಂತೆ!

ನಾಗರಶೈಲಿ :  ಶ್ರೀರಾಮಮಂದಿರ ಉತ್ತರ ಭಾರತದ ನಾಗರಶೈಲಿಯಲ್ಲಿ ನಿರ್ಮಾಣವಾಗಲಿದೆ . 3 ಅಂತಸ್ತಿನ 161 ಅಡಿ ಎತ್ತರದಲ್ಲಿ ದೇವಾಲಯ ನಿರ್ಮಾಣವಾಗಲಿದ್ದು, 5 ಸಣ್ಣ ಗೋಪುರಗಳನ್ನು ಹೊಂದಿರಲಿದೆ. ಮಂದಿರ ಕಟ್ಟಡ ನಿರ್ಮಾಣಕ್ಕೆ ಸುಮಾರು 300 ಕೋಟಿ ರೂ ವೆಚ್ಚ, ದೇಗುಲ ಪ್ರಾಂಗಣದ ಸುತ್ತಲಿನ ಪ್ರದೇಶದ ಅಭಿವೃದ್ಧಿಗೆ 1,000 ಕೋಟಿ ರೂ ವೆಚ್ಚ ತಗುಲಲಿದೆ. ಮೂರರಿಂದ ಮೂರುವರೆ ವರ್ಷದಲ್ಲಿ ನಿರ್ಮಾಣಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

Exit mobile version