Site icon PowerTV

ಕಿಷ್ಕಿಂಧೆಯಲ್ಲಿ ಚಕ್ರವರ್ತಿ ಸೂಲಿಬೆಲೆ

ಕೊಪ್ಪಳ : ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆಡದಿದೆ. ಅದೇ ರೀತಿ ಶ್ರೀರಾಮನ ಭಕ್ತ ಹನುಮ ಹುಟ್ಟಿದ ನಾಡು ಕಿಷ್ಕಿಂಧೆಯಲ್ಲೂ ಸರ್ಕಾರದ ನಿರ್ದೇಶನದಂತೆ ಪೂಜಾ ಕಾರ್ಯಕ್ರಮ ಹೋಮ ಹವನ, ಪಠಣ ನೆಡೆದವು ಇದಕ್ಕೆ ಯುವ ಬ್ರಿಗೇಡ್ ಮುಖ್ಯಸ್ಥರಾಗಿರುವ ಚಕ್ರವರ್ತಿ ಸೂಲಿಬೆಲೆ ಸಾಕ್ಷಿಯಾದರು.

ಹೌದು ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಇಂದು ಬೆಳಿಗ್ಗೆಯಿಂದಲೇ ಸರ್ಕಾರದ ಆದೇಶದ ಮೇರೆಗೆ ಹೊಮ ಹವನ ಮತ್ತು ಆಂಜನೇಯನಿಗೆ ಭರ್ಜರಿ ಹೂವಿನ ಅಲಂಕಾರ ಮಾಡಿ ಪೂಜಾ ಕಾರ್ಯಕ್ರಮವನ್ನು ಮಾಡಲಾಯಿತು. ಇಂದು ಬೆಳಗ್ಗೆ ಆಗಮಿಸಿದ್ದ ಚಕ್ರವರ್ತಿ ಸೂಲಿಬೆಲೆ ಬರೊಬ್ಬರಿ 575 ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ಮೇಲಿರುವ ಆಂಜನೇಯನ ದರ್ಶನ‌ ಪಡೆದು ಪುನಿತರಾದರು. ಇನ್ನೂ ಇವತ್ತು ಚಕ್ರವರ್ತಿ ಈ ಬೆಟ್ಟಕ್ಕೆ ಬರುವುದಕ್ಕೆ ಮೂಲ ಕಾರಣ ಅಯೋಧ್ಯೆಯಲ್ಲಿ ನೆಡೆಯುತ್ತಿರುವ ಭೂಮಿ ಪೂಜೆ.. ಹೌದು ದೂರದ ಅಯೋಧ್ಯೆಗೆ ಇಲ್ಲಿಂದಲೆ ಶ್ರೀರಾಮ ಭಕ್ತ ಹನುಮ ಹುಟ್ಟಿದ ನಾಡು ಕಿಷ್ಕಿಂಧೆಯಲ್ಲಿ ಪೂಜೆ ಮಾಡುವ ಮೂಲಕ ಹನುಮ ಭಕ್ತರ ಮೆಚ್ಚುಗೆ ಪಡೆದರು.. ಇನ್ನೂ ಬೆಟ್ಟದ ಮೇಲೆ ಸುಮಾರು ಗಂಟೆಗಳ ಕಾಲ ಸಮಯವನ್ನು ಕಳೆದ ಸೂಲಿಬೆಲಿ ಯುವ ಬ್ರಿಗೇಡ್ ಲಾಂಛನವಿರುವ ಗಾಳಿ ಪಟವನ್ನು ಹಾರಿಸಿ ಗಮನ ಸೆಳೆದರು. ಇನ್ನೂ ಚಕ್ರವರ್ತಿ ಸೂಲಿಬೆಲೆ ಸ್ಥಳೀಯ ಹಿಂದೂ ಪರಿಷತ್ ಕಾರ್ಯಕರ್ತರು ಹಾಗೂ ಯು ಬ್ರಿಗೇಡ್ ಟೀಮ್ ಮತ್ತು ಸ್ಥಳೀಯ ಬಿಜೆಪಿ ಮುಖಂಡರು ಭಾಗವಹಿಸಿದ್ದರು.

ಶುಕ್ರಾಜ ಕುಮಾರ,ಪವರ್ ಟಿವಿ ಕೊಪ್ಪಳ

Exit mobile version