Site icon PowerTV

ಅಯೋಧ್ಯೆಯ ಶ್ರೀರಾಮನ ದೇಗುಲ ನಿರ್ಮಾಣಕ್ಕೆ ಕಲಬುರಗಿಯಿಂದ 9 ಕೆಜಿ ತೂಕದ ಬೆಳ್ಳಿ ಇಟ್ಟಿಗೆ ಕೊಡುಗೆ

ಕಲಬುರಗಿ : ಕೋಟ್ಯಾಂತರ ಭಾರತೀಯರ ಹಲವು ದಶಕಗಳ ಕನಸಾಗಿದ್ದ ಅಯೋಧ್ಯೆಯ ಶ್ರೀರಾಮ ದೇಗುಲ ನಿರ್ಮಾಣಕ್ಕೆ ಕಲಬುರಗಿ ನಗರದ ರಾಮನ ಭಕ್ತ ಭವಾನಿ ರಾಜು ಎಂಬುವವರು 9 ಕೆಜಿ ತೂಕದ ಬೆಳ್ಳಿ ಇಟ್ಟಿಗೆಯನ್ನ ಕೊಡುಗೆ ನೀಡಲಿದ್ದಾರೆ.. ಇಂದು ನಗರದ ಶ್ರೀರಾಮನ ದೇವಸ್ಥಾನದಲ್ಲಿ ಅಯೋಧ್ಯೆಯಲ್ಲಿ ಶಿಲನ್ಯಾಸ ಕಾರ್ಯಕ್ರಮ ಅಂಗವಾಗಿ ಬೆಳ್ಳಿ ಇಟ್ಟಿಗೆಗೆ ಪಂಚಾಮೃತಗಳಿಂದ ವಿಶೇಷ ಪೂಜೆ ನೆರವೇರಿಸಲಾಗಿದೆ.. ಪೂಜೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಹಾಗೂ ಶ್ರೀರಾಮ ಸೇನೆ ಮತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆಗಳ ಅನೇಕರು ಭಾಗವಹಿಸಿದ್ದರು.. ಇನ್ನೂ ಕಳೆದ ಜನೆವರಿ ತಿಂಗಳಲ್ಲಿ ಪಶ್ಚಿಮ ಬಂಗಾಳದ ಕೋಲ್ಕತಾ ಮೂಲದ ಚಿನ್ನಾಭರಣ ವ್ಯಾಪಾರಿಯೋರ್ವರಿಗೆ ಈ ಬೆಳ್ಳಿ ಇಟ್ಟಿಗೆ ನಿರ್ಮಾಣದ ಗುತ್ತಿಗೆ ನೀಡಲಾಗಿತ್ತು.. ಕೊರೊನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಶಿಲನ್ಯಾಸ ಕಾರ್ಯಕ್ರಮಕ್ಕೆ ಬೆಳ್ಳಿ ಇಟ್ಟಿಗೆಯನ್ನ ನೀಡಲು ಆಗದಿರುವುದರಿಂದ, ಮುಂದಿನ ತಿಂಗಳು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್‌ರ ಮೂಲಕ ಅಯೋಧ್ಯೆ ಟ್ರಸ್ಟ್‌ಗೆ ಬೆಳ್ಳಿ ಇಟ್ಟಿಗೆ ನೀಡಲು ನಿರ್ಧರಿಸಲಾಗಿದೆ..

Exit mobile version