Site icon PowerTV

ವರುಣನ ಆರ್ಭಟ | ಕುಂದಗೋಳ ತಾಲೂಕಿನಲ್ಲಿ ಜಲಾವೃತವಾದ ಬೆಳೆ

ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ನಿನ್ನೆಯಿಂದ ವರುಣನ ಆರ್ಭಟ ಜೋರಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಬಾರಿ ಅವಾಂತರ‌ ಸೃಷ್ಟಿಯಾಗಿದೆ. ಮಳೆಯಿಂದಾಗಿ ಹೊಲ ಗದ್ದೆಗಳು ಜಲಾವೃತವಾಗಿವೆ. ಕುಂದಗೋಳ ತಾಲೂಕಿನ ಅಲ್ಲಾಪುರ, ಕಡಪಟ್ಟಿ, ಹಳ್ಯಾಳ ಸೇರಿದಂತೆ ಹಲವು ಗ್ರಾಮಗಳ ರೈತರಿಗೆ ನಷ್ಟವಾಗಿದೆ. ಹೊಲ ಗದ್ದೆಗಳು ಸಂಪೂರ್ಣ ಜಲಾವೃತವಾಗಿವೆ. ಎಡೆಬಿಡದೆ ಸುರಿದ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಮಳೆಯ ಅವಾಂತರದಿಂದಾಗಿ ಬೆಳೆದ ಬೆಳೆಯೆಲ್ಲಾ ನೀರುಪಾಲಾಗಿವೆ‌. ಹತ್ತಿ, ಮೆಣಸಿನಕಾಯಿ, ಸೂರ್ಯಕಾಂತಿ, ಉಳ್ಳಾಗಡ್ಡಿ ಬೆಳೆಗಳು ನಾಶವಾಗಿದ್ದು ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

Exit mobile version