Site icon PowerTV

ಅಕ್ರಮ ಸ್ಫೋಟಕ ದಾಸ್ತಾನು ಹೊಂದಿದ್ದ ವ್ಯಕ್ತಿಯ ಅರೆಸ್ಟ್..!

ದಕ್ಷಿಣ ಕನ್ನಡ : ಯಾವುದೇ ಪರವಾನಗೆ ಇಲ್ಲದೆ ಅಕ್ರಮವಾಗಿ ಪಿಸ್ತೂಲ್ ಗಳನ್ನು ಹಾಗೂ ಸ್ಫೋಟಕಗಳನ್ನ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಕಡಬ ಪೊಲೀಸರು ಅರೆಸ್ಟ್ ಮಾಡಿದ್ದಾರೆ.‌ ಬಂಧಿತ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಜನಾರ್ಧನ ಗೌಡ ಎಂದು ಗುರುತಿಸಲಾಗಿದೆ. ಆರೋಪಿ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದ ಕಡಬ ಪೊಲೀಸರು, ಆತನಿಂದ 2 ಪಿಸ್ತೂಲ್ ಮತ್ತು 2 ಖಾಲಿ ತೋಟೆ ಹಾಗೂ ರಂಜಕ, ಪೊಟ್ಯಾಶಿಯಂ ಕೇಪುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಜನಾರ್ಧನ‌ ಗೌಡ ನ ಮೇಲೆ ಈ ಹಿಂದೆ ಯಾವುದೇ ಕ್ರಿಮಿನಲ್ ಚಟುವಟಿಕೆಯ ಹಿನ್ನೆಲೆ ಇಲ್ಲವಾದರೂ, ಈತ ಅಕ್ರಮವಾಗಿ ಸ್ಫೋಟಕ ಯಾಕಾಗಿ ಹೊಂದಿದ್ದ ಅನ್ನೋದರ ಕುರಿತು ತನಿಖೆ ನಡೆಯುತ್ತಿದೆ. ಅಲ್ಲದೇ ಆರೋಪಿತನು ಹೊಂದಿರುವ ಸ್ಫೋಟಕ ಯಾವ ಉದ್ದೇಶಕ್ಕಾಗಿ ಬಳಕೆಯಾಗಿತ್ತು ಅನ್ನೋ ಕುರಿತಾಗಿಯೂ ಕಡಬ ಪಿಎಸ್ಐ ರುಕ್ಮ ನಾಯ್ಕ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಆರೋಪಿಯ ಮೇಲೆ ಶಸ್ತಾಸ್ತ್ರಗಳ ಅಧಿನಿಯಮ ಹಾಗೂ ಸ್ಪೋಟಕಗಳ ಅಧಿನಿಯಮದಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇರ್ಷಾದ್ ಕಿನ್ನಿಗೋಳಿ
ಪವರ್ ಟಿವಿ, ಮಂಗಳೂರು

Exit mobile version