Site icon PowerTV

UPSC ಪರಿಕ್ಷೆಯಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ ಸವಿತಾ ಗೊಟ್ಯಾಳ, ಅಕ್ಕನಂತೆ ತಂಗಿಯ ಸಾಧನೆ..!

ವಿಜಯಪುರ : ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ವಿಜಯಪುರದ ಯುವತಿ ಸಾಧನೆ ಮಾಡಿದ್ದಾಳೆ. ಬಸವನಾಡಿನ ಯುವತಿ ದೇಶಕ್ಕೆ 626 ನೇ ರಾಂಕ್ ಪಡೆದು ಜಿಲ್ಲೆಯ ರಾಜ್ಯದ ಕೀರ್ತಿ ಹೆಚ್ಚಿಸಿದ್ದಾಳೆ. ಸವಿತಾ ಗೋಟ್ಯಾಳಗೆ 626 ನೇ ರಾಂಕ್ ಬಂದಿದ್ದು ಅಕ್ಕ ಸವಿತಾಳಿಗೆ ಕೂಡಾ ಸಂತಸ ತಂದಿದೆ. ಅಕ್ಕ 2015ರ ಯು ಪಿ ಎಸ್ ಸಿ ಪರಿಕ್ಷೆಯಲ್ಲಿ 625ನೇ ರಾಂಕ್ ಪಡೆಯುವ ಮೂಲಕ ಈಗಾಗಲೇ ಪಂಜಾಬಿನ ಲುಧಿಯಾನಾದಲ್ಲಿ ಎಡಿಸಿಪಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ತಂದೆ ಸಿದ್ದಪ್ಪ ಗೋಟ್ಯಾಳ ಬಿ ಎಸ್ ಎನ್ ಎಲ್ ನಲ್ಲಿ ನೌಕರರಾಗಿದ್ದರು. ಹಿರಿಯ ಮಗಳು ಐಪಿಎಸ್ ಅಧಿಕಾರಿಯಾಗುತ್ತಿದ್ದಂತೆ ಸ್ವಯಂ ನಿವೃತ್ತಿ ಪಡೆದಿದ್ದರು. ಗೋಟ್ಯಾಳ ಕುಟುಂಬದಲ್ಲಿ ಸಹೋದರಿಯರ ಸಾಧನೆಯಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಹಿರಿಯಕ್ಕನ ಸಾಧನೆಯ ಹಾದಿಯಲ್ಲಿ ತಂಗಿಯ ಪಯಣ ಕೂಡಾ ಮುಂದು ವರೆದಿದೆ. ಈಗ ಗೊಟ್ಯಾಳ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ…

Exit mobile version