Site icon PowerTV

ಬಾಣಂತಿ ಸೇರಿ ಮೂವರ ಬಲಿ ಪಡೆದ ಕೊರೋನಾ

ಮಂಡ್ಯ : ಅವಳಿ ಮಕ್ಕಳಿಗೆ ಜನ್ಮ ನೀಡಿ ಕೊರೋನಾ ಸೋಂಕಿತೆ ಸಾವಿಗೀಡಾದ ಘಟನೆ ಮಂಡ್ಯ ಕೊವಿಡ್ ಆಸ್ಪತ್ರೆಯಲ್ಲಿ ನಡೆದಿದೆ.‌ ಬಾಣಂತಿ ಸೇರಿದಂತೆ ಇಂದು ಮೂವರು ಕೊರೋನಾಗೆ ಬಲಿಯಾಗಿದ್ದಾರೆ.
ಚನ್ನಪಟ್ಟಣ ಮೂಲದ 19 ವರ್ಷದ ಬಾಣಂತಿ ಸೇರಿದಂತೆ ಕನಕಪುರ ತಾಲ್ಲೂಕಿನ ವೃದ್ದೆ ಹಾಗೂ ಮಂಡ್ಯದ ನಿವಾಸಿಯೊಬ್ಬರು ಬಲಿಯಾಗಿದ್ದಾರೆ. ಎಲ್ಲರೂ ಮಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮಂಡ್ಯದ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಸಾವಿಗೀಡಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.

Exit mobile version