Site icon PowerTV

ಜನಾಂಗೀಯ ನಿಂದನೆ ಆರೋಪ ; ಶಾಸಕ ಪಿಟಿ ಪರಮೇಶ್ವರ್ ನಾಯ್ಕ್ ವಿರುದ್ಧ ದೂರು ದಾಖಲು !!

ಬಳ್ಳಾರಿ : ಜನಾಂಗೀಯ ನಿಂದನೆ ಮತ್ತು ಮತೀಯ ದ್ವೇಷ ಆರೋಪದ ಮೇಲೆ ಹೂವಿನ ಹಡಗಲಿ ಶಾಸಕ ಪಿಟಿ ಪರಮೇಶ್ವರ್ ನಾಯ್ಕ್ ವಿರುದ್ಧ ದೂರು ದಾಖಲಾಗಿದೆ. ಕೊರಚ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತಡಿದ್ದಾರೆಂದು ಪ್ರಕರಣ ದಾಖಲಿಸಲಾಗಿದೆ. ಯಾವುದೋ ಪ್ರಕರಣಕ್ಕೆ ಇಡೀ ಸಮುದಾಯವನ್ನು ತಳುಕು ಹಾಕಿ ಒಂದು ಸಮುದಾಯವೇ ಕಳ್ಳರೆಂದು ಪರಮೇಶ್ವರ್ ನಾಯ್ಕ್ ಅವಹೇಳನ ಮಾಡಿದ್ದಾರೆ ಎನ್ನುವ ವಿಡಿಯೋ ವೈರಲ್ ಅಗಿತ್ತು. ಈ ಹಿನ್ನೆಯಲ್ಲಿ ಶಾಸಕ ಪಿಟಿ ಪರಮೇಶ್ವರ್ ನಾಯ್ಕ್ ವಿರುದ್ಧ ಹಿರೇಹಡಗಲಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಹಿನ್ನೆಲೆ :

ಕಳೆದ ವಾರ ಕುರುವತ್ತಿ ಅರಣ್ಯ ಪ್ರದೇಶದಲ್ಲಿ ಕುರಿಗಳ್ಳರು ಸಿಕ್ಕಿಬಿದ್ದಿದ್ದರು. ಇಬ್ಬರು ಸಿಕ್ಕಿಬಿದ್ದು ನಾಲ್ವರು ಎಸ್ಕೇಪ್ ಆಗಿದ್ದರು. ಎಸ್ಕೇಪ್ ಆದ ನಾಲ್ವರು ಕಳ್ಳರನ್ನು ತಂದೊಪ್ಪಿಸಲು ಉಳಿದ ಇಬ್ಬರು ಕಳ್ಳರನ್ನು  ಇಟ್ಟುಕೊಂಡಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಶಾಸಕ ಪಿಟಿ ಪರಮೇಶ್ವರ್ ನಾಯ್ಕ್ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಕೊರಚ ಸಮುದಾಯದ ಅವಹೇಳನ ಮಾಡಿದ್ದಾರೆ. ನನ್ನ ಕಾಲದಲ್ಲಿ ಯಾರೂ ಬಾಲಬಿಚ್ಚಿರಲಿಲ್ಲ, ಮಾಚೊವಳ್ಳಿ, ಅಗ್ರ,ಯಲ್ಲಾಪುರ ಕೊರಚರು ಅಂತ ಇಡೀ ಒಂದು ಸಮುದಾಯ ಕಳ್ಳರು ಎನ್ನುವ ಅರ್ಥದಲ್ಲಿ ಮಾತಾಡಿದ್ದಾರೆ. ಶಾಸಕರ ಮಾತಿಗೆ ಇದೀಗ ಕೊರಚ ಸಮುದಾಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು ಶಾಸಕರ ವಿರುದ್ಧ ದೂರು ದಾಖಲಾಗಿದೆ.

-ಅರುಣ್ ನವಲಿ, ಬಳ್ಳಾರಿ

Exit mobile version