Site icon PowerTV

ಅಕ್ರಮ ಕಲ್ಲು ಗಣಿಕಾರಿಕೆಗೆ ಕಡಿವಾಣ : ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಚಿತ್ರದುರ್ಗ :  ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಸಿಹಿನೀರು ಕಟ್ಟೆ ಗ್ರಾಮದ ಹೊರ ವಲಯದ ಸರಕಾರಿ ಜಮೀನು ನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಹಾಗು ಅದರಿಂದ ಅಗೋ ಅನಾಹುತದ ಸಾಧ್ಯತೆ ಬಗ್ಗೆ ಕುರಿತು ಪವರ್ ಟಿವಿ ಎಳೆ ಎಳೆಯಾಗಿ ವರದಿ ಮಾಡಿತ್ತು.ಇದರ ಬೆನ್ನಲ್ಲೇ ಎಚ್ಚೆತ್ತ ತಾಲೂಕು ಅಡಳಿತ ಹಾಗು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಸಿಲಿಸಿದ್ದಾರೆ.

ಅಕ್ರಮ ಗಣಿಗಾರಿಕೆಯನ್ನ ಮನಗಂಡ ಹೊಳಲ್ಕೆರೆ ತಹಸಿಲ್ದಾರ್ ನಾಗಾರಜ್​ರವರು ಗಣಿಗಾರಿಕೆ ಪ್ರದೇಶದಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದಾರೆ.ಮುಂದಿನ ಅದೇಶದವರೆಗೂ ಸೆಕ್ಷನ್144 ಜಾರಿಯಲ್ಲಿದ್ದು ತಪ್ಪಿಸ್ತರ ವಿರುದ್ಧ ಕ್ರಮ ಕೈಗೊಳ್ಳಲು ತಾಲ್ಲೂಕು ಆಡಳಿತ ಮುಂದಾಗಿದೆ. ಅಕ್ರಮ ಗಣಿಗಾರಿಕೆಯಿಂದ ಬೇಸರಗೊಂಡಿದ್ದ ಗ್ರಾಮಸ್ಥರ ಸದ್ಯ ನಿರಾಳರಾಗಿ ಪವರ್ ಟಿವಿಗೆ  ಅಭಿನಂದನೆ ಸಲ್ಲಿಸಿದ್ದಾರೆ.

Exit mobile version