Site icon PowerTV

ನ್ಯಾಯಾಲಯಕ್ಕೆ ನಾಗರಹಾವು..!

ಗದಗ : ಜಿಲ್ಲೆಯ ನರಗುಂದ ಪಟ್ಟಣದ ನ್ಯಾಯಾಲಯದೊಳಗೆ ನಾಗರಹಾವು ಕಾಣಿಸಿಕೊಂಡು ಸ್ವಲ್ಪ ಹೊತ್ತು ಆತಂಕಕ್ಕೆ ಎಡೆಮಾಡಿಕೊಟ್ಟಿತು. ಸುಮಾರು‌ 5 ಅಡಿ ಉದ್ದದ ಹಾವು ಕಂಡು ವಕೀಲರು, ನ್ಯಾಯಾಲಯದ ಸಿಬ್ಬಂದಿ ಗಲಿಬಿಲಿಗೊಂಡಿದ್ದಾರೆ. ನಾಗರಹಾವು ಇರುವುದನ್ನು ಸ್ಥಳೀಯ ಉರಗ ತಜ್ಞ ಹಾಗೂ ಗೃಹ ರಕ್ಷಕ ಸಿಬ್ಬಂದಿ ಬಿ.ಆರ್ ಸುರೇಬಾನ್ ಆಗಮಿಸಿ ಕೆಲ ಕಾಲ ಪ್ರಯತ್ನಿಸಿ ಹಾವನ್ನು ಸೆರೆ ಹಿಡಿದು ತೆಗೆದುಕೊಂಡು ಅರಣ್ಯ ಪ್ರದೇಶದತ್ತ ಬಿಟ್ಟಿದ್ದಾರೆ. ಆನಂತರ ವಕೀಲರು, ಸಾರ್ವಜನಿಕರು ನಿಟ್ಟುಸಿರು ಬಿಟ್ಟರು. ಮಳೆಯಿಂದ ಕೋರ್ಟ್ ಆವರಣದ ಸುತ್ತಲೂ ಗಿಡಗಂಟೆ, ಕಸ ಬೆಳೆದಿವೆ. ಅಲ್ಲಲ್ಲಿ ಕೊಳಚೆ ನೀರು ನಿಂತಿದ್ದು, ಹಿಗಾಗಿ ಕೋರ್ಟ್ ಗೆ ಹಾವು, ಚೇಳುಗಳು ಬರುತ್ತಿವೆ. ಹೀಗಾಗಿ ಕೂಡಲೇ ಸ್ವಚ್ಛತೆಗೆ ಪುರಸಭೆ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Exit mobile version