Site icon PowerTV

ಕೋಟೆ ನಾಡಿನಲ್ಲಿ ಕರೋನಾ ಗೆದ್ದು ಬಂದ 110 ರ ವೃದ್ಧೆ ಸಿದ್ಧಮ್ಮ

ಚಿತ್ರದುರ್ಗ: ಇಳಿ ವಯಸ್ಸಿನಲ್ಲೂ ಬತ್ತದ ಲವಲವಿಕೆ ಉತ್ಸಾಹದಿಂದ ಆಸ್ಪತ್ರೆಯಿಂದ ಹೊರ ಬಂದಿರೋ 110 ವರುಷದ ವೃದ್ಧೆ ಸಿದ್ದಮ್ಮ. ಅಂದಹಾಗೆ ಚಿತ್ರದುರ್ಗ ನಗರದ ಡಿ.ಎ.ಆರ್ ಕ್ವಾಟ್ರರ್ಸ್​ನಲ್ಲಿ ವಾಸವಾಗಿರೋ ಈ ಅಜ್ಜಿ ಕೆಳೆದ ತಿಂಗಳು ಕರೋನಾ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಕೊವಿಡ್​ ಗುರಿಯಾಗಿದ್ದರು. ಟೆಸ್ಟ್ ನಲ್ಲಿ ಪಾಸಿಟಿವ್ ಬಂದ ಕಾರಣ ಕಳೆದ ತಿಂಗಳು 27 ಕ್ಕೆ ಕೊವಿಡ್ ಸೆಂಟರ್​ನಲ್ಲಿ ದಾಖಲು ಆಗಿದ್ದರು.

ಆದರೆ ಇಂದು ಕೇವಲ 6 ದಿನಗಳಲ್ಲಿ ಕರೋನಾದಿಂದ ಗೆದ್ದು ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬಂದಿದ್ದಾರೆ.ಅಜ್ಜಿ ಹೇಗೆ ಇದ್ದೀಯಾ ಅಂತ ಕೇಳಿದ್ರೆ ನಗು ಮುಖದಿಂದ ನಂಗೇನು ಆಗಿದೆ ಅಂತ ಖುಷಿಯಾಗಿ ಉತ್ತರ ನೀಡುತ್ತಾರೆ. ವಯಸ್ಸು ಆದವರಿಗೆ ಕರೋನಾ ಬಂದ್ರೆ ಬದುಕೋದು ಕಷ್ಟ ಅಂತ ಮನಸ್ಥಿತಿ ಇರೋ ಈಗಿನ ದಿನಗಳಲ್ಲಿ ಉತ್ತಮ ಆಹಾರ ಹಾಗು ಶುಚಿತ್ವವನ್ನು ಕಾಪಾಡಿಕೊಂಡು ಬಿಸಿಬಿಸಿ ಆಹಾರ ಸೇವಿಸಿ ಸಕಾರಾತ್ಮಕವಾಗಿ ಇದ್ದರೆ ಕರೋನಾ ಗೆದ್ದು ಬರಬಹುದು ಅನ್ನೋದು ತೋರಿಸಿ ಕೊಟ್ಟಿದ್ದಾರೆ.ಇನ್ನೂ ಕೊರೋನಾ ಮಾಹಾಮಾರಿ ಜೊತೆ ಸಮರ ಸಾರಿರೋ ಚಿತ್ರದುರ್ಗದ ಆರೋಗ್ಯ ಇಲಾಖೆಗೆ ಈ ವೃದ್ಧೆ ಗುಣಮುಖವಾಗಿರೋದು ಹೆಮ್ಮೆಯ ವಿಷಯವಾಗಿದೆ.

Exit mobile version