Site icon PowerTV

ಕೊರೊನಾದಿಂದ ಕಂಗೆಟ್ಟ ಕುಟುಂಬ; ಒಂದೇ ಮನೆಯ 9 ಜನಕ್ಕೆ ಪಾಸಿಟಿವ್, ಇಬ್ಬರು ಸಾವು

ಬಳ್ಳಾರಿ : ಜಿಲ್ಲೆಯ ಸಿರಿಗೇರಿ ಗ್ರಾಮದ ಕುಟುಂಬವೊಂದು ಕೊರೊನಾ ರೋಗಕ್ಕೆ ಸಿಲುಕಿ ನಲುಗಿ ಹೋಗಿದೆ. ಕುಟುಂಬದ 9 ಜನಕ್ಕೆ ಪಾಸಿಟಿವ್ ಬಂದಿದ್ದು. ಒಂಬತ್ತು ಜನರಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಕಳೆದ ಶುಕ್ರವಾರ 60 ವರ್ಷದ ವೃದ್ದೆ ಮೃತಪಟ್ಟಿದ್ದರು. ನಿನ್ನೆ ಅವರ ಪತಿ 66 ವರ್ಷದ ವ್ಯಕ್ತಿ ಮೃತರಾಗುವುದರ ಮೂಲಕ ಕೊರೊನಾ ಒಂದು ವಾರದ ಅಂತರದಲ್ಲಿ ದಂಪತಿ ಬಲಿಯಾಗಿದ್ದಾರೆ. ಇನ್ನು ಮಕ್ಕಳು ಸೇರಿ ಏಳು ಜನರು ಪಾಸಿಟಿವ್ ಇದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ದುರಂತದ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಜನಾರ್ಧನ್, ಸೋಂಕಿತರನ್ನು ಕೊನೆಹಂತದಲ್ಲಿ ಆಸ್ಪತ್ರೆಗೆ ಕರೆತಂದಿದ್ದು ಸಾವಿಗೆ ಕಾರಣ ಎಂದಿದ್ದಾರೆ. ರೋಗ ಉಲ್ಬಣಕ್ಕೂ ಮುನ್ನ ಆಸ್ಪತ್ರೆಗೆ ಬರುವುದರ ಮೂಲಕ ಜೀವ ಉಳಿಸಿಕೊಳ್ಳುವುದು ಸಾದ್ಯ ಎಂದು ಹೇಳಿದರು. ರೋಗಲಕ್ಷಣಗಳು ಕಾಣಿಸಿಕೊಂಡ ಕೂಡಲೇ ತುರ್ತಾಗಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಿ ಅಂತ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜನಾರ್ಧನ್ ಮನವಿ ಮಾಡಿದ್ದಾರೆ.

ಅರುಣ್ ನವಲಿ ಪವರ್ ಟಿವಿ ಬಳ್ಳಾರಿ

Exit mobile version