Site icon PowerTV

ಸಾರ್ವಜನಿಕ ಸೇವೆಗೆ ಇದ್ದ ಸಾರಿಗೆ ಇಲಾಖೆ ಬಸ್ಸಲ್ಲಿ ಕಲ್ಲು ತುಂಬಿ ಎಡವಟ್ಟು ಮಾಡಿದ ಸಾರಿಗೆ ಸಿಬ್ಬಂದಿ

ಹುಬ್ಬಳ್ಳಿ : ಬಸ್ ನಲ್ಲಿ ಸಾಮಾನ್ಯವಾಗಿ ಜನರು ಪ್ರಯಾಣಿಸುತ್ತಾರೆ. ಆದ್ರೆ ಜನರು ‌ಓಡಾಡಬೇಕಾಗಿದ್ದ ಬಸ್ ನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಿಬ್ಬಂದಿ ಗೂಡ್ಸ್ ವಾಹನದಂತೆ ಬಳಸಿಕೊಂಡಿದ್ದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಹೌದು. ಇದು ಅಚ್ಚರಿಯಾದ್ರು ಸತ್ಯ‌. ಜನರು ಓಡಾಡಲು ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸದ ಸಾರಿಗೆ ಇಲಾಖೆ ಸುಸಜ್ಜಿತವಾದ ಸಾರಿಗೆ ಬಸ್ ನ್ನು ಗೂಡ್ಸ ವಾಹನದಂತೆ ಬಳಕೆ ಮಾಡಿಕೊಂಡಿದೆ.

ನಗರದ ಹೊಸೂರು ಸರ್ಕಲ್ ನಲ್ಲಿ ರೋಡ ಡಿವೈಡರ್ ಕಾಮಗಾರಿ ನಡೆದಿದ್ದು, ಡಿವೈಡರ್ ಗೆ ಹಾಕಲಾಗಿದ್ದ ಕಲ್ಲುಗಳನ್ನು ಸಾಗಿಸಲು ಬಸ್ ಗಳನ್ನು ಬಳಸಲಾಗಿದೆ. ಬಸ್ ನಲ್ಲಿ ಮೆಟ್ಟಿಲುಗಳು ಹಾಗೂ ಒಳಗಡೆ ಕಲ್ಲುಗಳನ್ನು ತುಂಬಿ ಡಿಪೋಗೆ ಸಾಗಿಸಲಾಗಿದೆ. ಇದಕ್ಕೆ ಸಾರಿಗೆ ಇಲಾಖೆ ಸಿಬ್ಬಂದಿಗಳನ್ನು ಕೂಲಿಯಾಳುಗಳಂತೆ ಬಳಸಿಕೊಳ್ಳಲಾಗಿದೆ.

ಸಂಸ್ಥೆ ಆರ್ಥಿಕ ನಷ್ಟದಲ್ಲಿದೆ. ಸರಿಯಾದ ಆದಾಯವಿಲ್ಲ ಎಂದು ಕೊರಗುತ್ತಿರುವ ಸಂದರ್ಭದಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧಿಕಾರಿಗಳಹು ಒಳ್ಳೆ ಬಸ್ ಗಳನ್ನು ಗೂಡ್ಸ್ ವಾಹನದಂತೆ ಬಳಸಿಕೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

Exit mobile version