Site icon PowerTV

ಪಾಕ್​ ವಿರುದ್ಧ ಮೊದಲ ಟೆಸ್ಟ್​ಗೆ ಇಂಗ್ಲೆಂಡ್​ ತಂಡ ಪ್ರಕಟ

ಲಂಡನ್ :  ಇಂಗ್ಲೆಂಡ್ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಖುಷಿಯಲ್ಲಿದ್ದು, ತವರಿನಲ್ಲಿ ಪಾಕಿಸ್ತಾನ್ ವಿರುದ್ಧ ಅಖಾಡಕ್ಕೆ ಇಳಿಯಲು ರೆಡಿಯಾಗಿದೆ. ಪಾಕ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಮ್ಯಾಚ್​ಗೆ ಇಂದು ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ವಿಂಡೀಸ್ ವಿರುದ್ಧದ ತಂಡವನ್ನೇ ಉಳಿಸಿಕೊಳ್ಳಲಾಗಿದೆ. ತಂಡದಲ್ಲಿ ಬದಲಾವಣೆಯಾಗಿಲ್ಲ.

ಆಗಸ್ಟ್​ 5ರಿಂದ ಪಾಕ್ ಮತ್ತು ಇಂಗ್ಲೆಂಡ್​  ನಡುವೆ ಟೆಸ್ಟ್​ ಸರಣಿ ಆರಂಭವಾಗಲಿದೆ. ಕೊರೋನಾ ಕಾರಣದಿಂದ ಇಂಗ್ಲೆಂಡ್​ನಲ್ಲೇ ಸಂಪೂರ್ಣ ಅಭ್ಯಾಸ ನಡೆಸಲೆಂದು ಪಾಕಿಸ್ತಾನ ಒಂದು ತಿಂಗಳ ಹಿಂದೆಯೇ ಇಂಗ್ಲೆಂಡ್​ಗೆ ಬಂದಿಳಿದಿದೆ.

ಇನ್ನು ಇಂಗ್ಲೆಂಡ್​ ಸೌಥಾಂಪ್ಟನ್​ನಲ್ಲಿ ನಡೆದ ಮೊದಲ ಮ್ಯಾಚ್​ನಲ್ಲಿ ವಿಂಡೀಸ್ ವಿರುದ್ಧ ಸೋತಿತ್ತು. ಆದ್ರೆ ಮುಂದಿನ ಎರಡೂ ಮ್ಯಾಚ್​ಗಳಲ್ಲೂ ಗೆದ್ದು 2-1 ಅಂತರದಿಂದ ಸರಣಿಯನ್ನು ಕೈವಶ ಮಾಡಿಕೊಂಡಿತ್ತು.

ಪಾಕ್ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ತಂಡ : ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ರೋರಿ ಬರ್ನ್ಸ್, ಜೋಸ್ ಬಟ್ಲರ್, ಜಾಕ್ ಕ್ರಾಲೆ, ಆಲ್ಲಿ ಪೋಪ್, ಡೊಮ್ ಸಿಬ್ಲಿ, ಜೇಮ್ಸ್ ಆಂಡರ್ಸನ್, ಜೋಫ್ರಾ ಆರ್ಚರ್, ಡೊಮಿನಿಕ್ ಬೆಸ್, ಸ್ಟುವರ್ಟ್ ಬ್ರಾಡ್, ಸ್ಯಾಮ್ ಕುರ್ರನ್, ಕ್ರಿಸ್ ವೋಕ್ಸ್,  ಮಾರ್ಕ್ ವುಡ್.

Exit mobile version