Site icon PowerTV

4 ಶಾಸಕರ ಅಧ್ಯಕ್ಷ ಸ್ಥಾನ ಹಿಂಪಡೆದ ಸಿಎಂ

ಬೆಂಗಳೂರು :  ಸೋಮವಾರ ಬೆಳಗ್ಗೆ 24 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಿದ್ದ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಧಾನ ಬುಗಿಲೆದ್ದ ಪರಿಣಾಮ ನಾಲ್ವರು ಶಾಸಕರಿಗೆ ನೀಡಲಾಗಿದ್ದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳನ್ನು ಹಿಂಪಡೆಯಲಾಗಿದೆ.

ಚಿತ್ರದುರ್ಗ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕಾಪು ಶಾಸಕ ಲಾಲಾಜಿ ಆರ್‌ ಮೆಂಡನ್‌, ಕನಕಗಿರಿ ಶಾಸಕ ಬಸವರಾಜ್‌ ದಢೇಸೂರ್ ಅವರಿಗೆ ನೀಡಿದ್ದ ಸ್ಥಾನವನ್ನು ಸಿಎಂ ವಾಪಸ್ ಪಡೆದಿದ್ದಾರೆ.

ಜಿ.ಎಚ್‌.ತಿಪ್ಪಾರೆಡ್ಡಿಗೆ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಸ್ಥಾನ , ಪರಣ್ಣ ಮುನವಳ್ಳಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಲಾಲಾಜಿ ಆರ್‌.ಮೆಂಡನ್‌ಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಹಾಗೂ ಬಸವರಾಜ್‌ ದಢೇಸೂರ್‌ಗೆ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಲಾಗಿತ್ತು.

Exit mobile version