Site icon PowerTV

ಕುರಿ ಮೇಯಿಸ್ತಿದ್ದಾರೆ ಕಾಗಿನೆಲೆ ಶ್ರೀ …ಕಾರಣ ಏನ್ ಗೊತ್ತಾ?

 

ದಾವಣಗೆರೆ : ಕೊರೋನಾ ಸಂಕಷ್ಟ ಕಾಲದಲ್ಲಿಯೂ ಮಠಕ್ಕೆ ಜನ ಹರಿದು ಬರುತ್ತಿರುವುದು ಗಮನಿಸಿದ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮಿಜಿ, ಭಕ್ತರಿಂದ ಅಂತರ ಕಾಯ್ದುಕೊಳ್ಳಲು ಅಡವಿಯಲ್ಲಿ ಕುರಿ ಕಾಯುವುದಕ್ಕೆ ಮುಂದಾಗಿದ್ದಾರೆ..!

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಮತ್ತು ಬಳ್ಳಾರಿ ಜಿಲ್ಲೆಯ ಮೈಲಾರ ಶಾಖಾ ಮಠ ಹಾಗೂ ಹಾವೇರಿಯ ಗುರುಪೀಠ ಕಾಗಿನೆಲೆಯ ಮಠಗಳಿಗೆ ನಿತ್ಯ ನೂರಾರು ಭಕ್ತರ ಆಗಮಿಸುತ್ತಿದ್ದರು.. ಈ ಮೊದಲು ಮಠಗಳಿಗೆ ಭಕ್ತರು ಸದ್ಯ ಬರುವುದು ಬೇಡ ಎಂದು ಶ್ರೀಗಳು ಮನವಿ ಮಾಡಿದ್ದರು.. ಆದರೂ ಸಹ ಭಕ್ತರ ಸಂಖ್ಯೆ ಹೆಚ್ಚಳ ಆಗುತ್ತಿದ್ದ ಹಿನ್ನಲೆ, ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಿ ಬಳ್ಳಾರಿ ಜಿಲ್ಲೆಯ ಮೈಲಾರದಲ್ಲಿ ಸ್ವಂತ ಕುರಿಗಳ ಹಿಂಡು ಇದ್ದು, ಕೆಲ ದಿನ ಕುರಿ ಪಾಲನೆಗೆ ಮುಂದಾಗಿ ಅಡವಿಯಲ್ಲಿ ಕುರಿ ಮೇಯಿಸುತ್ತಿದ್ದಾರೆ. 

ಸ್ವತಃ ಕುರುಬ ಜನಾಂಗದವರಾಗಿರುವ ಸ್ವಾಮೀಜಿ, ಜನಾಂಗದ ಕುಲಕಸುಬಾದ ಕುರಿ ಪಾಲನೆ ಮರೆಯದೇ ಮಠದಲ್ಲಿ ಕುರಿ ಹಿಂಡು ಸಾಕಿದ್ದಾರೆ.

 

 

Exit mobile version