Site icon PowerTV

ಸರ್ಕಾರದ ವಿರುದ್ಧವೇ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಅಸಮಾಧಾನ

ಚಿತ್ರದುರ್ಗ : ಬಿ.ಜಿ.ಪಿ ಸರ್ಕಾರದ ಒಂದು ವರುಷದ ಸಂಭ್ರಮದ ದಿ‌ನವೇ ಚಿತ್ರದುರ್ಗದ ಬಿ.ಜೆ.ಪಿ ಶಾಸಕ ತಿಪ್ಪಾರೆಡ್ಡಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.ಸಚಿವ ಸ್ಥಾನದ ಆಕಾಂಕ್ಷೆ ಅಗಿದ್ದ ಶಾಸಕ ತಿಪ್ಪಾರೆಡ್ಡಿ ವರಿಗೆ ಸರಕಾರ ದೇವರಾಜ್ ಅರಸ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದಕ್ಕಾಗಿ ಬೇಸರವನ್ನ ಹೊರಹಾಕಿದ್ದಾರೆ.
ನನಗೆ ಅವಮಾನ ಮಾಡಲೆಂದೆ ಈ ಸ್ಥಾನ ನೀಡಲಾಗಿದೆ ಅಂತ ಗಂಭೀರವಾಗಿ ಸಿ.ಎಮ್ ವಿರುದ್ದ ಸಿಡಿದ್ದಾರೆ.ಈ ಹಿಂದೆ 1994ರಲ್ಲಿ ಗೃಹ ಮಂಡಳಿ ಅದ್ಯಕ್ಷರಾಗಿ ಕೆಲಸ ಮಾಡಿದ್ದ ಶಾಸಕ ತಿಪ್ಪಾರೆಡ್ಡಿ ಯವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು ಅದ್ರೆ ಸರಕಾರದ ಈ ನಿರ್ಧಾರದಿಂದ ತುಂಬಾ ಬೇಸರವಾಗಿದೆ ರಾಜಕೀಯ ಕ್ಕೆ ಬಂದಿದ್ದೆ ತಪ್ಪು ಎಂಬಾ ಬಾವನೆ ಬಂದಿದೆ ಅಂತ ಚಿತ್ರದುರ್ಗ ದಲ್ಲಿ ಶಾಸಕ ತಿಪ್ಪಾರೆಡ್ಡಿ ತಮ್ಮ ಅಸಮಾಧಾನವನ್ನ ಹೊರಹಾಕಿದ್ದಾರೆ

Exit mobile version