Site icon PowerTV

ವಯಸ್ಸು ಕೇವಲ ಸಂಖ್ಯೆ ; ಫಿಟ್​ ಆಗಿರೋವರೆಗೂ ಧೋನಿ ಆಡಲಿ : ಗೌತಮ್ ಗಂಭೀರ್

ನವದೆಹಲಿ :  ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ 2019ರ ಒಡಿಐ ವರ್ಲ್ಡ್​ಕಪ್ ಬಳಿಕ ಕ್ರಿಕೆಟ್ ಮೈದಾನಕ್ಕೆ ಇಳಿದಿಲ್ಲ.  ಐಪಿಎಲ್​ನಲ್ಲಿ ಅಬ್ಬರಿಸಿ ಟೀಮ್ ಇಂಡಿಯಾಕ್ಕೆ ಕಮ್​​ಬ್ಯಾಕ್ ಮಾಡ್ತಾರೆ ಅಂತ ಅಭಿಮಾನಿಗಳು ಕಾಯ್ತಿದ್ರು. ಆದ್ರೆ ಕೊರೋನಾ ಐಪಿಎಲ್​ಗೆ ಅಡ್ಡಿಪಡಿಸಿದೆ. ಮಾರ್ಚ್​ 29ರಿಂದಲೇ ನಡೆಯಬೇಕಿದ್ದ ಐಪಿಎಲ್ ಮುಂದೂಡಲ್ಪಟ್ಟಿದ್ದು, ಸೆಪ್ಟೆಂಬರ್​​ – ನವೆಂಬರ್ ಅವಧಿಯಲ್ಲಿ ನಡೆಯೋ ಸಾಧ್ಯತೆ ಇದೆ. ಅದು ಕೂಡ ಇನ್ನೂ ಕೂಡ ಪಕ್ಕಾ ಆಗಿಲ್ಲ.

ಇನ್ನು ವರ್ಲ್ಡ್​ಕಪ್​ ಮುಗಿದಲ್ಲಿಂದಲೂ ಧೋನಿ ಮತ್ತೆ ಆಡ್ತಾರ? ಆಡಲ್ವಾ? ಅನ್ನೋ ಚರ್ಚೆ ನಡೀತಲೇ ಇದೆ.  ಇದೀಗ ಧೋನಿ ನಿವೃತ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಕ್ರಿಕೆಟಿಗ, ಸಂಸದ ಗೌತಮ್​ ಗಂಭೀರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ. ಧೋನಿ ಫಿಟ್ ಆಗಿರೋವರೆಗೂ ಹಾಗೂ ಅವರು ಆಟವನ್ನು ಆನಂದಿಸೋವರೆಗೂ ಆಡ್ಬೇಕು. ದೇಶಕ್ಕಾಗಿ ಪಂದ್ಯ ಗೆಲ್ಲಿಸಬಹುದು ಅನ್ನೋ ವಿಶ್ವಾಸವಿದ್ದರೆ ನಿವೃತ್ತಿ ಪಡೆದುಕೊಳ್ಳೋ ಅವಶ್ಯಕತೆ ಇಲ್ಲ. ಅವರ ಮೇಲೆ ಹೆಚ್ಚಿನ ಒತ್ತಡ ಬೀರಬಹುದು. ಆದ್ರೆ, ಅದು ಅವರ ವೈಯಕ್ತಿಕ ನಿರ್ಧಾರ. ಕ್ರಿಕೆಟ್ ಆಡಲು ಪ್ರಾರಂಭಿಸಿದ್ದಂತೆಯೇ ನಿವೃತ್ತಿ ಘೋಷಣೆ  ಮಾಡೋದು ಕೂಡ ವೈಯಕ್ತಿಕ ನಿರ್ಧಾರ ಅಂತ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

2011 ವಿಶ್ವಕಪ್​ ಫೈನಲ್​ನಲ್ಲಿ ಭಾರತದ ಗೆಲುವಿನಲ್ಲಿ ಗಂಭೀರ್ ಮತ್ತು ಧೋನಿ ಪ್ರಮುಖಪಾತ್ರವಹಿಸಿದ್ದರು. ಶ್ರೀಲಂಕಾ ವಿರುದ್ಧ ನಡೆದ ಫೈನಲ್​ ಮ್ಯಾಚಲ್ಲಿ ಗಂಭೀರ್ 97ರನ್ ಹಾಗೂ ಧೋನಿ ಅಜೇಯ 91 ರನ್ ಬಾರಿಸಿದ್ದರು.

Exit mobile version