Site icon PowerTV

ನಮ್ಮ ಪ್ರತಿ ಹೆಜ್ಜೆಯೂ ಯೋಧರ ಗೌರವ ಹೆಚ್ಚುವಂತಿರಲಿ : ಮನ್​​ ಕಿ ಬಾತ್​ನಲ್ಲಿ ಮೋದಿ

ನವದೆಹಲಿ :  ಇಂದು ಕಾರ್ಗಿಲ್  ವಿಜಯಕ್ಕೆ 21ನೇ ವರ್ಷದ ಸಂಭ್ರಮ.  ಕಾರ್ಗಿಲ್ ವಿಜಯ್ ದಿವಸದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಗಿಲ್ ಯೋಧರನ್ನು ಸ್ಮರಿಸಿದ್ದಾರೆ. ಭಾರತದ ರಕ್ಷಣಾ ಶಕ್ತಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ನಮ್ಮ ವೀರ ಯೋಧರಿಗೆ ಮೋದಿ ನೆನೆದಿದ್ದಾರೆ.

ಮನ್​ ಕಿ ಬಾತ್​​ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ಕಾರ್ಗಿಲ್ ವಿಜಯದ 21ನೇ ವರ್ಷಾಚರಣೆ ಪ್ರಯಕ್ತ ದೇಶಕ್ಕೆ ಅಭಿನಂದನೆ ಸಲ್ಲಿಸಿದರು. ಕಾರ್ಗಿಲ್ ಯುದ್ಧ ಭಾರತದ ಸಾಮರಿಕ ಕ್ಷಮತೆಯ ಪ್ರತೀಕ. ನಮ್ಮ ಯೋಧರ ತ್ಯಾಗ, ಬಲಿದಾನವನ್ನು ನಾವೆಂದೂ ಕೂಡ ಮರೆಯುವುದಿಲ್ಲ. ನಮ್ಮ ಪ್ರತಿಯೊಂದು ಹೆಜ್ಜೆಯೂ ಭಾರತೀಯ ಸೈನಿಕರ ಗೌರವ ಹೆಚ್ಚಿಸುವಂತಿರಬೇಕು ಎಂದರು.

 ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಜಯದತ್ತ :  ಇನ್ನು ಕೊರೋನಾ ವಿಚಾರ ಮಾಡಿ ಮಾತನಾಡಿದ ಮೋದಿ, ಭಾರತ ಕೊರೋನಾ ವಿರುದ್ಧದ ಹೋರಾಟದಲ್ಲಿ ಗೆಲುವಿನತ್ತ ಸಾಗಿದೆ. ಆದ್ರೂ ಕೂಡ ಕೊರೋನಾವನ್ನು ಹಗುರವಾಗಿ ಪರಿಗಣಿಸಬಾರದು ಎಂದು ಕಿವಿಮಾತು ಹೇಳಿದರು. ಕೊರೋನಾ ವಿರುದ್ಧದ ಹೋರಾಟದ ಈ ಹಂತದಲ್ಲಿ ಮೈಮರೆಯಬಾರದು. ಅಂತಿಮವಾಗಿ ಜಯ ನಮ್ಮದೇ. ನಾವೆಲ್ಲಾ ಒಟ್ಟಾಗಿ ಶ್ರಮಿಸೋಣ ಎಂದು ಹೇಳಿದರು.

 ವಿದ್ಯಾರ್ಥಿಗಳೊಂದಿಗೆ ಮಾತು :  ಇದೇ ವೇಳೆ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳೊಂದಿಗೆ ನೇರವಾಗಿ ದೂರವಾಣಿ ಮೂಲಕ ಪ್ರಧಾನಿ ಮಾತನಾಡಿದರು

Exit mobile version