Site icon PowerTV

ಸಚಿನ್ ಪೈಲಟ್ ಬಣಕ್ಕೆ ರಿಲೀಫ್​

 ಜೈಪುರ : ರಾಜಸ್ಥಾನ ಮಾಜಿ ಉಪ ಮುಖ್ಯಮಂತ್ರಿ  ಸಚಿನ್ ಪೈಲಟ್ ಮತ್ತು 18 ಮಂದಿ ಬಂಡಾಯ ಶಾಸಕರ ವಿರುದ್ಧ ಯಾವ್ದೇ  ಕ್ರಮ ಕೈಗೊಳ್ಳದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜಸ್ಥಾನ ಹೈಕೋರ್ಟ್​ ಸ್ಫೀಕರ್​​ಗೆ ಆದೇಶಿಸಿದೆ. ಇದರಿಂದ  ಸಚಿನ್​​ ಪೈಲಟ್​ ಹಾಗೂ ಇತರೆ 18 ಮಂದಿ ಕಾಂಗ್ರೆಸ್ ಶಾಸಕರಿಗೆ ತಾತ್ಕಲಿಕ ರಿಲೀಫ್ ಸಿಕ್ಕಿದೆ.

ಶಾಸಕರು ತಮ್ಮ ಅನರ್ಹತೆ ಪ್ರಕ್ರಿಯೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು . ಜುಲೈ 24ರವರೆಗೆ ಯಾವ್ದೇ ಕ್ರಮ ಜರುಗಿಸಬಾರದು ಅಂತ ಹೈಕೋರ್ಟ್ ಇತ್ತೀಚೆಗೆ ಹೇಳಿತ್ತು. ಆದ್ರೆ, ಅನರ್ಹತೆ ಅನ್ನೋದು ವಿಧಾನಸಭೆಯ ಕಲಾಪಕ್ಕೆ ಸಂಬಂಧಿಸಿದ ವಿಚಾರ. ಇದರಲ್ಲಿ ಹೈಕೋರ್ಟ್ ಮಧ್ಯ ಪ್ರವೇಶಿಸುವಂತಿಲ್ಲ. ಹಾಗಾದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುತ್ತೆ ಅಂತ ಸ್ಪೀಕರ್ ಸಿ.ಪಿ ಜೋಶಿ ಸುಪ್ರೀಂಕೋರ್ಟ್  ಮೊರೆ ಹೋಗಿದ್ರು. ನಿನ್ನೆ ಜೋಶಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಡೆಸಿದ್ದ ಸುಪ್ರೀಂ  ಹೈಕೋರ್ಟ್ ಆದೇಶ ನೀಡಬಹುದು ಅಂತ ಹೇಳಿತ್ತು. ಸುಪ್ರೀಂನ ಈ ಆದೇಶದಿಂದ ಸ್ಪೀಕರ್ ಜೋಶಿ ಹಾಗೂ ಸಿಎಂ ಅಶೋಕ್ ಗೆಹ್ಲೋಟ್​​ ಗೆ ಹಿನ್ನೆಡೆಯಾಗಿತ್ತು.

ಇಂದು ಕೇಂದ್ರ ಸರ್ಕಾರವನ್ನು ಪ್ರಕರಣದ ಕಕ್ಷಿದಾರರನ್ನಾಗಿಸಬೇಕೆಂಬ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಮುಂದಿನ ಆದೇದವರೆಗೂ ಶಾಸಕರ ಅನರ್ಹತೆಗೆ ತಡೆಯೊಡ್ಡಿದೆ. ಇದರಿಂದ ಸಚಿನ್ ಪೈಲಟ್ ಮತ್ತು ಟೀಮ್​ಗೆ ನಿರಾಳತೆ ಸಿಕ್ಕಿದ್ದು, ಅವರೆಲ್ಲಾ ಸದ್ಯ ಅನರ್ಹತೆ ತೂಗುಗತ್ತಿಯಿಂದ ಬಚಾವಾಗಿದ್ದಾರೆ.  ಬಹುಮತ ಸಾಬೀತುಪಡಿಸಿ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿರೋ ಸಿಎಂ ಬಣಕ್ಕೆ ದೊಡ್ಡತಲೆನೋವು ಎದುರಾಗಿದೆ.

Exit mobile version