Site icon PowerTV

ಕರಾವಳಿಯಲ್ಲಿ  ಮುಂದುವರಿದ ಲಾಕ್​ಡೌನ್

ಮಂಗಳೂರು : ರಾಜ್ಯದಲ್ಲಿಇಂದಿನಿಂದ ಲಾಕ್​ಡೌನ್​ಗೆ ತೆರೆಬಿದ್ದಿದೆ. ಆದ್ರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದೂ ಕೂಡ ಲಾಕ್​ಡೌನ್ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 15ರ ರಾತ್ರಿ 8 ಗಂಟೆಗೆ ಲಾಕ್​ಡೌನ್ ಆರಂಭವಾಗಿದ್ದು, ನಾಳೆ ಬೆಳಗ್ಗೆ 5 ಗಂಟೆ ತನಕ ಅದು ಮುಂದುವರಿಯಲಿದೆ.

ನಾಳೆಯಿಂದ ಜಿಲ್ಲೆಯಲ್ಲಿ ಜನಜೀವನ ಸಹಜ ಸ್ಥಿತಿಗೆ ಬರಲಿದೆ. ಇಂದು ಬೆಳಗ್ಗೆ 11 ಗಂಟೆ ತನಕ ಮಾತ್ರ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ವ್ಯಾಪಾರವನ್ನೂ ನಿಲ್ಲಿಸಲಾಗಿದೆ.

ಇನ್ನು ಮಂಗಳೂರು ನಗರ ಹಾಗೂ ಜಿಲ್ಲೆಯ ಗ್ರಾಮೀಣ ಭಾಗಗಳು ಯಥಾಸ್ಥಿತಿಗೆ ಮರಳುತ್ತಿವೆ. ಸಾರ್ವಜನಿಕರ ಓಡಾಟ ಕಮ್ಮಿಯಾಗಿಲ್ಲ. ಖಾಸಗಿ ವಾಹನಗಳ ಸಂಚಾರ ನಿಂತಿಲ್ಲ. ಹೆಸರಿಗಷ್ಟೇ ಲಾಕ್​ಡೌನ್ ಅನ್ನೋ ಪರಿಸ್ಥಿತಿ ಇದೆ ಅನ್ನೋದನ್ನು ಕೂಡ ಗಮನಿಸಬೇಕಿದೆ.

-ಇರ್ಷಾದ್ ಕಿನ್ನಿಗೋಳಿ

 

Exit mobile version