Site icon PowerTV

ಹಾಸನದಲ್ಲಿ ಮತ್ತೊಮ್ಮೆ ಕೊರೋನಾ ಮಹಾಸ್ಫೋಟ..!

ಹಾಸನ : ಹಾಸನ ಜಿಲ್ಲೆಯಲ್ಲಿ ಇಂದು ಹೊಸದಾಗಿ 78 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 1127 ಕ್ಕೆ ಏರಿಕೆಯಾಗಿದೆ. ಈವರೆಗೆ 611 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 481 ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 35 ಮಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.

ಇಂದು 2 ಜನ ಕೋವಿಡ್-19ನಿಂದ ಮೃತಪಟ್ಟಿದ್ದಾರೆ. 42 ವರ್ಷದ ಒಬ್ಬ ಮಹಿಳೆ ಉಸಿರಾಟದ ತೊಂದರೆಯಿಂದ ಹಾಗೂ ಕ್ಷಯ ರೋಗದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅರಸೀಕೆರೆ ತಾಲ್ಲೂಕಿನ 42 ವರ್ಷದ ವ್ಯಕ್ತಿಯು ಉಸಿರಾಟದ ತೊಂದರೆಯಿಂದ ಮೂರು ದಿನದ ಹಿಂದೆ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಕೊರೋನಾದಿಂದ ಮೃತಪಟ್ಟಿದ್ದಾರೆ. ಇಂದು ಪತ್ತೆಯಾದ 78 ಪ್ರಕರಣಗಳಲ್ಲಿ 15 ಜನ ಅರಸೀಕೆರೆ ತಾಲ್ಲೂಕಿನವರು, 6 ಮಂದಿ ಚನ್ನರಾಯಪಟ್ಟಣ ತಾಲ್ಲೂಕಿನವರು, 33 ಜನ ಹಾಸನ ತಾಲ್ಲೂಕು, 7 ಜನ ಹೊಳೆನರಸೀಪುರ ತಾಲ್ಲೂಕು, ಆಲೂರು ತಾಲ್ಲೂಕಿನಲ್ಲಿ ಇಬ್ಬರು, 10 ಜನ ಅರಕಲಗೂಡು ತಾಲ್ಲೂಕು ಹಾಗೂ 5 ಜನ ಬೇಲೂರು ತಾಲ್ಲೂಕಿನವರಾಗಿದ್ದಾರೆ.

Exit mobile version