Site icon PowerTV

ಜನ ಇದ್ರೆ ನಾವಿರೋಕೆ ಸಾಧ್ಯ, ಜನ ಉಳಿಸಲು ಲಾಕ್ ಡೌನ್ ಅನಿವಾರ್ಯ – ಹೆಚ್.ಡಿ.ರೇವಣ್ಣ

ಹಾಸನ : ಹಾಸನದಲ್ಲಿ ಕೊರೊನಾ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಹಾಫ್ ಡೇ ಲಾಕ್ ಡೌನ್ ಗೆ‌ ಅವಕಾಶ ಕೊಡಿ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಒತ್ತಾಯ ಮಾಡಿದ್ದಾರೆ. ಹಾಸನದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ರೇವಣ್ಣ ಒತ್ತಾಯ ಮಾಡಿದರು.

ಜನ ಇದ್ರೆ ನಾವಿರೋಕೆ ಸಾಧ್ಯ, ಜನ ಉಳಿಸಲು ಲಾಕ್ ಡೌನ್ ಅನಿವಾರ್ಯ, ನಮ್ಮ ನಮ್ಮ ಕ್ಷೇತ್ರದ ಬಗ್ಗೆ ನಮಗೆ ಅಧಿಕಾರ ಕೊಡಿ, ಅಧಿಕಾರಿಗಳು, ವರ್ತಕರು ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ, ಮಧ್ಯಾಹ್ನದ ನಂತರ ಹಾಫ್ ಡೇ ಲಾಕ್ ಡೌನ್ ಅವಕಾಶ ಕೊಡಿ, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ, ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಿ ಎಂದು ಹೆಚ್. ಡಿ. ರೇವಣ್ಣ ಸಭೆಯಲ್ಲಿ ಹೇಳಿದರು.

Exit mobile version