Site icon PowerTV

ಕೊರೋನಾ ಭೀತಿ – ಸಿದ್ಧಾರೂಢ ಪುಣ್ಯಾರಾಧನೆ ರದ್ದು

ಹುಬ್ಬಳ್ಳಿ : ಸದ್ಗುರು ಸಿದ್ಧಾರೂಢರ 91ನೇ ಪುಣ್ಯಾರಾಧನೆ ಅಂಗವಾಗಿ ನಡೆಯಬೇಕಿದ್ದ ವಿವಿಧ ಕಾರ್ಯಕ್ರಮಗಳನ್ನು ಕೊರೋನಾ ಸೋಂಕು ಹರಡುವಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ.

ಜು.29 ರಿಂದ ಆ.4ರವರೆಗೆ ಸಾಮೂಹಿಕ ಪಲ್ಲಕ್ಕಿ ಉತ್ಸವ, ಆರೂಢ ಶ್ರಾವಣ, ಜಲ ರಥೋತ್ಸವ, ಭಕ್ತರ ಮೇಲ್ಮನೆ ಸಭೆ ಕಾರ್ಯಕ್ರಮಗಳು ರದ್ದುಗೊಳಿಸಿದ್ದು, ಭಕ್ತರು ಸಹಕರಿಸಬೇಕು ಎಂದು ಸಿದ್ಧಾರೂಢ ಮಠದ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಡಿ.ಡಿ. ಮಾಳಗಿ ಕೊರಿದ್ದಾರೆ.

ಶ್ರಾವಣ ಮಾಸದ ಕಾರ್ಯಕ್ರಮಗಳನ್ನು ಮನೆಯಲ್ಲಿದ್ದುಕೊಂಡೇ ಸದ್ಗುರು ಸಿದ್ಧಾರೂಢ ಹಾಗೂ ಗುರುನಾಥರೂಢರ ಸ್ಮರಣೆ ಮಾಡಬೇಕು ಎಂದು ತಿಳಿಸಿದ್ದಾರೆ.

Exit mobile version