Site icon PowerTV

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ 14 ದಿನಗಳ ಲಾಕ್ ಡೌನ್ ವಿಸ್ತರಣೆ..?

ದಕ್ಷಿಣ ಕನ್ನಡ : ಜಿಲ್ಲೆಯಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆ ಸಾಧ್ಯತೆ ಬಗ್ಗೆ ಮಾತುಗಳು ಕೇಳಿ ಬಂದಿದೆ. ಈಗಾಗಲೇ ಜಿಲ್ಲಾಡಳಿತ ಘೋಷಿಸಿರುವ ಲಾಕ್ ಡೌನ್ ಜುಲೈ 23 ರ ಬೆಳಿಗ್ಗೆ 5 ಗಂಟೆಗೆ ಅಂತ್ಯವಾಗಲಿದ್ದು, ಮತ್ತೆ ವಿಸ್ತರಣೆ ಬಗ್ಗೆ ಜನ ಎದುರು ನೋಡುವಂತಾಗಿದೆ. ಸ್ವತಃ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೇ ಇದನ್ನ ಸ್ಪಷ್ಟಪಡಿಸಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಜನಪ್ರತಿನಿಧಿಗಳು ಮಾತ್ರವಲ್ಲದೇ ಸಾರ್ವಜನಿಕರೂ ಲಾಕ್ ಡೌನ್ ಅನ್ನು ಮತ್ತೆ ಹದಿನಾಲ್ಕು ದಿನಗಳ‌ ಕಾಲ ಮುಂದುವರೆಸುವಂತೆ‌ ಒತ್ತಾಯಿಸಿದ್ದಾರೆ‌. ಆದ್ದರಿಂದ ಇಂದು ಸಂಜೆ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಬಗ್ಗೆ ಚರ್ಚಿಸಲಿದ್ದೇವೆ. ಆದರೆ ನಾಳೆ ಸಿಎಂ ಜೊತೆಗಿನ ಮಾತುಕತೆ ಬಳಿಕವಷ್ಟೇ ಅಂತಿಮ ನಿರ್ಧಾರ ಮಾಡಲಾಗುವುದು ಅಂತಾ ಮಂಗಳೂರಿನಲ್ಲಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.‌ ಒಂದು ವೇಳೆ ಲಾಕ್ ಡೌನ್ ವಿಸ್ತರಣೆ ಜಾರಿಯಾದರೆ ನಾಗರ ಪಂಚಮಿ, ಬಕ್ರೀದ್ ಹಬ್ಬಗಳಿಗೆ ಹೆಚ್ಚಿನ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ.‌

ಇರ್ಷಾದ್ ಕಿನ್ನಿಗೋಳಿ, ಪವರ್ ಟಿವಿ, ಮಂಗಳೂರು

Exit mobile version