Site icon PowerTV

ಮಲೆನಾಡಿನಲ್ಲಿ ಮತ್ತೆ ಮುಂದುವರಿದ ಕಾಡಾನೆ ದಾಳಿ

ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ದಿನದಿಂದಾ ದಿನಕ್ಕೆ ಕಾಡಾನೆಗಳ ದಾಳಿ ಮುಂದುವರೆಯುತ್ತಲೇ ಇದ್ದು, ಪ್ರತಿನಿತ್ಯ ರೈತರ ಬೆಳೆಯನ್ನು ಕಾಡಾನೆಗಳು ದಾಳಿ ಮಾಡಿ ನಾಶ ಮಾಡುತ್ತಿವೆ.ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಂಜಿಗೆ,ಬಾಳೆಹಳ್ಳಿ, ಬಾನಳ್ಳಿ, ಬೆಳಗೋಡು, ಊರುಬಗೆ,ಗೌವನಹಳ್ಳಿ,ಕುಂಬಾರಡ್ಡಿ, ಕಿರುಗುಂದ ಆಲೇಖಾನ್ ಹೊರಟ್ಟಿ, ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳು ದಾಳಿ ಮಾಡುತ್ತಿದ್ದು, ಮೂಡಿಗೆರೆ ತಾಲೂಕಿನಲ್ಲಿ ಒಟ್ಟು 11 ಕಾಡಾನೆಗಳು ನಿರಂತರವಾಗಿ ದಾಳಿ ಮಾಡುತ್ತಿವೆ.ಕಿರುಗುಂದ ಗ್ರಾಮದಲ್ಲಿ ರೈತರು ಭತ್ತದ ಗದ್ದೆಗಳಿಗೆ ದಾಳಿ ಮಾಡಿ ನಿರಂತರ ದಾಳಿ ಮಾಡುತ್ತಿದ್ದು, ರೈತರು ಏನು ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ರೈತರ ಗದ್ದೆ ಹಾಗೂ ತೋಟಗಳಿಗೆ ರಾತ್ರಿ ವೇಳೆ ಕಾಡಾನೆಗಳು ದಾಳಿ ಮಾಡುತ್ತಿದ್ದು, ರೈತರ ಬೆಳೆಗಳನ್ನು ನಾಶ ಮಾಡಿ ಹೋಗುತ್ತಿವೆ. ಈ ಕುರಿತು ರೈತರು ಹಾಗೂ ಸುತ್ತ ಮುತ್ತಲ ಪ್ರದೇಶದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಹಲವಾರು ಭಾರೀ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಈಗಾಲಾದರೂ ಈ ಕಾಡಾನೆಗಳನ್ನು ಕಾಡಿಗಟ್ಟಿ ರೈತರ ಬೆಳೆಗಳನ್ನು ಉಳಿಸಿ ಎಂದೂ ರೈತರು ಅರಣ್ಯ ಇಲಾಖೆಯ ಸಿಬ್ಬಂಧಿಗಳಿಗೆ ಮನವಿ ಮಾಡುತ್ತಿದ್ದಾರೆ….

ಸಚಿನ್ ಶೆಟ್ಟಿ ಚಿಕ್ಕಮಗಳೂರು…

Exit mobile version