Site icon PowerTV

ಸರ್ಕಾರದ ಆದೇಶದನ್ವಯ ಮಾತ್ರ ಲಾಕ್ ಡೌನ್, ವಿಜಯಪುರ ಜಿಲ್ಲೆಯಲ್ಲಿ ಶನಿವಾರ ಲಾಕ್ ಡೌನ್ ಇಲ್ಲ – ಡಿಸಿ ವೈ.ಎಸ್ ಪಾಟೀಲ್

ವಿಜಯಪುರ : ಜಿಲ್ಲೆಯನ್ನು ಲಾಕ್ ಡೌನ್ ಮಾಡುವುದು ಜಿಲ್ಲಾಧಿಕಾರಿಗಳ ಕೈಯಲ್ಲಿ ಇಲ್ಲ, ಸರ್ಕಾರದ ಆದೇಶದನ್ವಯ ಮಾತ್ರ ಲಾಕ್ ಡೌನ್ ಮಾಡಲಾಗುತ್ತದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ವಿಜಯಪುರದಲ್ಲಿ ಇಂದು ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು ಶನಿವಾರ ಲಾಕ್ ಡೌನ್ ಮಾಡುವಂತೆ ನಮಗೆ ಸರ್ಕಾರ ತಿಳಿಸಿಲ್ಲ, ಆದರೆ ಸರ್ಕಾರದ ಆದೇಶದನ್ವಯ ಶನಿವಾರ ರಾತ್ರಿ 8 ಗಂಟೆಯಿಂದ ರವಿವಾರ ಬೆಳಗಿನ ಜಾವ 5 ಗಂಟೆ ವರೆಗೆ ಮಾತ್ರ ಲಾಕ್ ಡೌನ್ ಮಾಡಲಾಗುತ್ತದೆ. ಒಂದು ವೇಳೆ ಶನಿವಾರ ಸಹಿತ ಲಾಕ್ ಡೌನ್ ಮಾಡುವಂತೆ ಸರ್ಕಾರ ಸೂಚಿಸಿದರೆ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಲಾಕ್ ಡೌನ್ ಮಾಡಲು ಸಿದ್ದವಾಗಿದೆ ಎಂದರು…

Exit mobile version