Site icon PowerTV

ಎರಡು ಬಾರಿ ಸೀಲ್ ಡೌನ್ ಆಗಿದ್ದ ರಾಮನಗರ ಜೈಲ್ ಇಂದಿನಿಂದ ಓಪನ್..!

ರಾಮನಗರ : ಎರಡು ಬಾರಿ ಸೀಲ್ ಡೌನ್ ಆಗಿದ್ದ ರಾಮನಗರ ಜೈಲ್ ಇಂದಿನಿಂದ ಓಪನ್ ಆಗಿದೆ. 4 ತಿಂಗಳಿಂದ ಬಂದ್ ಆಗಿದ್ದ ರಾಮನಗರ ಜಿಲ್ಲಾ ಕಾರಾಗೃಹ ಒಪನ್ ಆಗಿದೆ. ಜಿಲ್ಲಾ ಕಾರಾಗೃಹಕ್ಕೆ ಹೊಸದಾಗಿ ಇಂದು 5 ಮಂದಿ ದಾಖಲಾಗಿದ್ದಾರೆ. ಕಳೆದ ಮಾ. 22 ರಂದು ಪಾದರಾಯನಪುರ ಆರೋಪಿಗಳನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.
ಆ ಸಂದರ್ಭದಲ್ಲಿ ಆರೋಪಿಗಳಿಗೆ ಪಾಸಿಟಿವ್ ಬಂದ ಹಿನ್ನಲೆ ಜೈಲ್ ನ ಸೀಲ್ ಡೌನ್ ಮಾಡಲಾಗಿತ್ತು.
ನಂತರದ ದಿನಗಳಲ್ಲಿ‌ ಜೈಲ್ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಬಂದ ಹಿನ್ನಲೆ ಮತ್ತೆ ರಾಮನಗರ ಜೈಲ್ ಸೀಲ್ ಡೌನ್ ಮಾಡಲಾಗಿತ್ತು.
ಆ ಸಂಧರ್ಭದಲ್ಲಿ ರಾಮನಗರ ಜೈಲಿನಲ್ಲಿದ್ದ 177 ಮಂದಿ ವಿಚಾರಣಾಧಿನ ಖೈದಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲ್ ಗೆ ಶಿಫ್ಟ್ ಮಾಡಲಾಗಿತ್ತು. ಅಂದಿನಿಂದ ಬಂದ್ ಆಗಿದ್ದ ರಾಮನಗರ ಜೈಲ್ ಇಂದಿನಿಂದ ಪುನರಾರಂಭ ಮಾಡಿದ್ದಾರೆ.
ಇನ್ನೂ ರಾಮನಗರದಿಂದ ಬೆಂಗಳೂರಿಗೆ ಶಿಫ್ಟ್ ಆಗಿರುವ ವಿಚಾರಣಾಧಿನ ಖೈದಿಗಳನ್ನ ರಾಮನಗರಕ್ಕೆ ಕರೆತರುವ ಬಗ್ಗೆ ಚರ್ಚೆ ಕೂಡ ನಡೆಯುತ್ತಿದ್ದು,
ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲೂ ಕೊರೋನಾ ಸೋಂಕು ಪತ್ತೆ ಆಗಿದ್ದು
ಮತ್ತೆ ಬೆಂಗಳೂರಿನಿಂದ ಆರೋಪಿಗಳು ಶಿಫ್ಟ್ ಆದರೆ ಜಿಲ್ಲೆಯಲ್ಲಿ ಕೊರೋನಾ ಆತಂಕ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ…

Exit mobile version