Site icon PowerTV

ಕೋವಿಡ್ ಸೆಂಟರ್ ನಲ್ಲಿ ಸೌಲಭ್ಯ ಇಲ್ಲದೇ‌ ಸೊಂಕೀತರ ಪರದಾಟ : ಪ್ರತಿಭಟನೆಗೆ ಮುಂದಾದ ಸೋಂಕಿತರು

ಹುಬ್ಬಳ್ಳಿ : ಸರಿಯಾಗಿ ಊಟ, ನೀರು‌ , ಟ್ಯಾಬ್ಲೆಟ್ ಇಲ್ಲ, ವೈದ್ಯಕೀಯ ಸಿಬ್ಬಂದಿ ಇಲ್ಲದೆ ಕೋವಿಡ್ ಕೇರ್ ಸೆಂಟರ್ ನಲ್ಲಿ 60 ಕ್ಕೂ ಹೆಚ್ಚು ಸೋಂಕಿತರು ಪರದಾಡುವಂತಾಗಿದೆ.

ಹುಬ್ಬಳ್ಳಿಯ ಘಂಟಿಕೇರಿಯಲ್ಲಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ ಘಟನೆ ನಡೆದಿದ್ದು, ನೂತನವಾಗಿ ಪ್ರಾರಂಭವಾದ ಕೋವಿಡ್ ಕೇರ್ ಸೆಂಟರ್ ನಲ್ಲಿ ವ್ಯವಸ್ಥೆ ಇಲ್ಲದೇ ಕೊರೋನಾ ಸೋಂಕಿತರು‌ ಪರದಾಡುವಂತಾಗಿದೆ. ಸರ್ಕಾರಿ ವಸತಿ ನಿಲಯವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬಳಕೆ ಮಾಡಿದ್ದು, ಕೊರೊನಾ ಸೋಂಕಿತರ ಕಷ್ಟ ಕೇಳುವವರೇ‌ ಇಲ್ಲದಂತಾಗಿದೆ.

ಸೋಂಕಿತರು ಸಾಕಷ್ಟು ಬಾರಿ ಮನವಿ ಮಾಡಿದರು ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲಾ.ಅಲ್ಲದೇ ಸೋಂಕಿತರು ಕೋವಿಡ್ ಕೇರ್ ಸೆಂಟರ್ ಬಿಟ್ಟು ಬರುವಂತಾಗಿದ್ದು, ಆವರಣದಲ್ಲಿ ನಿಂತು ಪರದಾಡುವಂತಾಗಿದೆ.ಅಲ್ಲದೇ ಸಿಬ್ಬಂದಿ ಮುಂದೆ ಅಳಲು ತೋಡಿಕೊಂಡ ಸೊಂಕಿತರು, ಚಿಕಿತ್ಸೆ ನಿಡ್ತಾ ಇಲ್ಲವೆಂದು ಪ್ರತಿಭಟನೆ ನಡೆಸಿದರು.

Exit mobile version