Site icon PowerTV

ಬಾಗಲಕೋಟೆಯಲ್ಲಿ ಇಂದು ಕೊರೊನಾಗೆ ಎರಡು ಬಲಿ | ಓರ್ವ ಶಂಕಿತ ಸಾವು

ಬಾಗಲಕೋಟೆ : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಆರ್ಭಟ ಹೆಚ್ಚುತ್ತಿದೆ. ಇಂದು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೂವರು ಸಾವನಪ್ಪಿದ್ದು ಸೋಂಕಿತರ ಸಾವಿನ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಸದ್ಯ ಬಾಗಲಕೋಟೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 587ಕ್ಕೆ ಏರಿದ್ದು, ಇಂದು ಸೋಂಕಿತರ ಸಂಖ್ಯೆ ಆರು ನೂರರ ಗಡಿ ದಾಟಲಿದೆ. ಇಂದು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಾವನಪ್ಪಿದವರಲ್ಲಿ ಇಬ್ಬರಿಗೆ ಕೋವಿಡ್ ದೃಡ ಪಟ್ಟಿದ್ದು, ಓರ್ವನ ವರದಿ ಬೆಂಗಳೂರಿಗೆ ರವಾನಿಸಲಾಗಿದೆ. ಬಾಗಲಕೋಟೆ ತಾಲ್ಲೂಕಿನ ಕೇಸನೂರು ಗ್ರಾಮದ ಸೋಂಕಿತೆ 60 ವರ್ಷದ ವೃದ್ಧೆ, ಬಾಗಲಕೋಟೆ ನಗರದ ಹಳೇಪೇಟೆ ನಿವಾಸಿ ಸೋಂಕಿತ 62 ವರ್ಷದ ವೃದ್ಧ‌ ಕೋವಿಡ್ ನಿಂದ ಸಾವನಪ್ಪಿದ್ದು ದೃಡ ಪಟ್ಟಿದೆ. ಇನ್ನು ನವನಗರದ 42 ವರ್ಷದ ಮೃತ ಶಂಕಿತ ವ್ಯಕ್ತಿಯ ಸ್ಯಾಂಪಲ್ ಬೆಂಗಳೂರಿಗೆ ಕಳುಹಿಸಲಾಗಿದ್ದು, ವೈದ್ಯರು ವರದಿಗೆ ಕಾಯ್ತಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ಸಾವನಪ್ಪಿದ ಮೂವರು ಜ್ವರ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೂವರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ ಎಂದು ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಪ್ರಕಾಶ್ ಬಿರಾದಾರ್ ಹೆಳಿದ್ದಾರೆ.

Exit mobile version