Site icon PowerTV

ಕೊರೋನಾ ಹಿನ್ನೆಲೆ ಗ್ರಾಮಕ್ಕೆ ಸ್ವಯಂ ದಿಗ್ಭಂಧನ

ವಿಜಯಪುರ : ಜಿಲ್ಲೆಯಲ್ಲಿ ಕೊರೋನಾ ಅಬ್ಬರಿಸುತ್ತಿರುವ ಹಿನ್ನಲೆ ಭಯದಿಂದ ಜನರು ಸ್ವಯಂ ಪ್ರೇರಿತವಾಗಿ ಗ್ರಾಮ ಲಾಕ್ ಡೌನ್ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮ ಇಂದಿನಿಂದ ಒಂದು ವಾರದವರೆಗೆ ಲಾಕ್ ಡೌನ್ ಆಗಲಿದೆ ಇನ್ನೂ ಜನರಿಗೆ ಅಗತ್ಯ ವಸ್ತುಗಳ ಮಾರಾಟ ಹಾಗೂ ಖರೀಧಿಗೆ ಸಮಯ ನಿಗದಿಪಡಿಸಲಾಗಿದೆ. ಬೆಳಿಗ್ಗೆ ೭ ರಿಂದ ೧೧ ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದ್ದು ತುರ್ತು ಸೇವೆ ಹೊರತು ಪಡಿಸಿ ಎಲ್ಲವೂ ಬಂದ್ ಮಾಡಿದ್ದಾರೆ. ಗ್ರಾಮದ ಹಿರಿಯರು ಹಾಗೂ ಯುವಕರು ಸೇರಿ ನಿರ್ಧಾರ ಕೈಗೊಂಡಿದ್ದು ಬೇಕಾಬಿಟ್ಟಿ ಯಾರೂ ಮನೆ‌ ಯಿಂದ ಹೊರ ಬಾರದಂತೆ ಕ್ರಮ ವಹಿಸಲಾಗಿದೆ. ಇನ್ನು ಸ್ವಯಂ ಲಾಕ್ ಡೌನ್ ಗೆ ಸ್ಥಳೀಯ ಜನಪ್ರತಿನಿಧಿಗಳು ಸಹಿತ ಗ್ರಾಮಸ್ಥರಿಗೆ ಸಾಥ್ ನೀಡಿದ್ದಾರೆ…

Exit mobile version