Site icon PowerTV

ಉಡುಪಿ : ಕೊರೋನಾ ಹಿನ್ನಲೆ ಐದನೇ ಸಾವು

ಉಡುಪಿ : ಕೊರೋನಾ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದಾರೆ. ಕಾಪು ತಾಲೂಕಿನ ಪಡುಬಿದ್ರಿಯ 82 ವರ್ಷ ಪ್ರಾಯದ ಇವರು ಶ್ವಾಸಕೋಶ ಹಾಗೂ ಕಿಡ್ನಿ ಸಮಸ್ಯೆ ಹಿನ್ನಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಇವರಲ್ಲಿ ಉಸಿರಾಟದ ತೊಂದರೆಯಿದ್ದ ಕಾರಣ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ನಿನ್ನೆ ಸಂಜೆ ಮೃತಪಟ್ಟಿದ್ದು, ವರದಿಯಲ್ಲಿ ಕೋವಿಡ್‌ ಪಾಸಿಟಿವ್ ಬಂದಿತ್ತು. ಕೋವಿಡ್ ಮಾರ್ಗಸೂಚಿಯಂತೆ ಬೀಡಿನಗುಡ್ಡೆಯಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಡಿಎಚ್ ಒ ಡಾ.ಸುಧೀರ್‌ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.

Exit mobile version