Site icon PowerTV

ವೈದ್ಯಾಧಿಕಾರಿ ನಿರ್ಲಕ್ಷ್ಯ ದಿಂದ 24 ಗಂಟೆ ಕಳೆದರು ಕೊರೋನ ಪೀಡಿತ ಮನೆಯಲ್ಲೆ…

ಬೆಂಗಳೂರು : ವೈದ್ಯಾಧಿಕಾರಿಯ ನಿರ್ಲಕ್ಷದಿಂದ ನಿನ್ನೆ ಮಧ್ಯಾಹ್ನ ಕೊರೋನಾ ಖಚಿತವಾಗಿರುವ ಮಹಿಳೆಯನ್ನು 24 ಗಂಟೆಯಾದರೂ ಸಹ ಆಸ್ಪತ್ರೆಗೆ ಸಾಗಿಸದೆ ಇರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಬಿ ಆರ್ ಎಂ ಆಶಿಶ್ ಲೇಔಟ್ನಲ್ಲಿ ನಡೆದಿದೆ. ಹೌದು ನೆನ್ನೆ ಮಧ್ಯಾಹ್ನ ಲೇಔಟ್ ನಲ್ಲಿ ವಾಸವಿದ್ದ 51 ವರ್ಷದ ಮಹಿಳಾ ಕೆಎಸ್ಆರ್ಟಿಸಿ ಕಂಡಕ್ಟರ್ ಸೋಂಕು ದೃಢಪಟ್ಟಿತ್ತು ಆದರೆ ಇಂದು ಮಧ್ಯಾಹ್ನವಾದರೂ ಸಹ ಯಾವುದೇ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿಲ್ಲ. ಜೊತೆಗೆ 24 ಗಂಟೆ ಕಳೆದರೂ ಮಹಿಳೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು ಇದರಿಂದಾಗಿ ಲೇಔಟ್ ನಲ್ಲಿ ವಾಸವಿರುವ ಜನರಿಗೆ ಬಹಳಷ್ಟು ಆತಂಕ ಉಂಟಾಗಿದೆ ಜೊತೆಗೆ ಪ್ರದೇಶ ಸೀಲ್ ಡೌನ್‌ ಆಗಿಲ್ಲ. ಅಧಿಕಾರಿಗಳ ನಿರ್ಲಕ್ಷದಿಂದಾಗಿ ಮನೆಯಿಂದ ಹೊರಬಾರದೆ ಅಲ್ಲಿನ ನಿವಾಸಿಗಳು ಭಯಭೀತರಾಗಿ ಕುಳಿತಿದ್ದಾರೆ. ಇಷ್ಟೆಲ್ಲ ತಿಳಿದಿದ್ದರೂ ಸಹ ತಾಲೂಕು ವೈದ್ಯ ಅಧಿಕಾರಿ ಅವರಿಂದ ಬೇಜವಾಬ್ದಾರಿ ವರ್ತನೆ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ..

Exit mobile version