Site icon PowerTV

ಲಾಕ್​ಡೌನ್​ ವಿಚಾರ ನಾಳೆ ನಿರ್ಧಾರ : ಡಿಸಿ ಪ್ರತಿಕ್ರಿಯೆ

ಉಡುಪಿ : ಲಾಕ್ಡೌನ್ ವಿಚಾರವಾಗಿ ನಾಳೆ ನಿರ್ಧಾರ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಮುಖ್ಯಮಂತ್ರಿಗಳ‌ ಜೊತೆ ವಿಡಿಯೋ ಕಾನ್ಫರೆನ್ಸ್ ಮುಗಿಸಿ ಬಂದ ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು ನಾಳೆ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಯ ಜಿಲ್ಲಾಧಿಕಾರಿ ಗಳಿಗೆ ಲಾಕ್ಡೌನ್ ಜವಾಬ್ದಾರಿ ನೀಡಿದ್ದಾರೆ. ಹಾಗಾಗಿ ನಾಳೆ ಸಾಧಕ ಭಾಧಕ ಕುರಿತು ಚರ್ಚೆ ನಡೆಸಿ ಲಾಕ್ಡೌನ್ ಅಥವಾ ಗಡಿ ಸೀಲ್ ಡೌನ್ ಮಾಡುವ ಕುರಿತು ‌ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Exit mobile version