Site icon PowerTV

ಪತಿ ಅಗಲಿಕೆಯಿಂದ ಮನನೊಂದ ಗೃಹಿಣಿ ಆತ್ಮಹತ್ಯೆ

ಮೈಸೂರು : ಪತಿ ಅಗಲಿಕೆಯಿಂದ ಮನನೊಂದ ಗೃಹಿಣಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಜೆ.ಪಿ.ನಗರದಲ್ಲಿ ನಡೆದಿದೆ.ಚಾಂದಿನಿ(೨೫) ಮೃತ ದುರ್ದೈವಿಯಾಗಿದ್ದಾರೆ.೨೧ ದಿನಗಳ ಹಿಂದೆ ಪತಿ ಮಧುಸೂಧನ್ ಮೃತಪಟ್ಟಿದ್ದರು.ಇದರಿಂದ ಬೇಸತ್ತಿದ್ದ ಚಾಂದಿನಿ ನೇಣಿಗೆ ಶರಣಾಗಿದ್ದಾರೆ.೫ ವರ್ಷಗಳ ಹಿಂದೆ ಮಧುಸೂಧನ್ ರನ್ನ ಮದುವೆಯಾಗಿದ್ದ ಚಾಂದಿನಿ ಅನ್ಯೋನ್ಯ ಸಂಸಾರ ನಡೆಸಿದ್ದರು.ಮಧುಸೂಧನ್ ಸಾವನ್ನಪ್ಪಿದ ನಂತರ ಚಾಂದಿನಿ ಪೋಷಕರು ಮತ್ತೊಂದು ವಿವಾಹ ಮಾಡಲು ನಿರ್ಧರಿಸಿದ್ದಾರೆ.ಚಿಕ್ಕ ವಯಸ್ಸಿನ ಮಗಳು ಒಂಟಿ ಜೀವನ ನಡೆಸುವುದು ಸರಿಯಲ್ಲವೆಂದು ಮಗಳ ಜೊತೆ ಚರ್ಚಿಸಿದ್ದಾರೆ.ಅಗಲಿದ ಪತಿಯ ನೆನಪಿನಿಂದ ಹೊರಬರದ ಚಾಂದಿನಿಗೆ ಮತ್ತೊಂದು ಮದುವೆ ವಿಚಾರ ಬೇಸರ ತಂದಿದೆ.ಈ ಹಿನ್ನಲೆ ಚಾಂದಿನಿ ನೇಣಿಗೆ ಶರಣಾಗಿದ್ದಾರೆ.ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Exit mobile version