Site icon PowerTV

ಸಾರಿಗೆ ಬಸ್ ಗಳಲ್ಲಿ ಸಾಮಾಜಿಕ ಅಂತರ ಮರೆತ ಪ್ರಯಾಣಿಕರು, ಸಾರಿಗೆ ಸಿಬ್ಬಂದಿ

ಹುಬ್ಬಳ್ಳಿ : ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದ್ದಂತೆ ಸಾಮಾಜಿಕ ಅಂತರ ಕೂಡ ಮರೆ ಮಾಚುತ್ತಿದೆ. ಅಲ್ಲದೇ ಎಷ್ಟೇ ಹೇಳಿದರು ಸಾರ್ವಜನಿಕರು ಕೇಳುತ್ತಿಲ್ಲ, ಸಾರಿಗೆ ಸಿಬ್ಬಂದಿಗಳಿಗು ಕೊರೋನಾ ವೈರಸ್ ಭೀತಿಯ ಬಗ್ಗೆ ಎಷ್ಟು ಹೇಳಿದರು ಅರ್ಥ ಆಗ್ತಿಲ್ಲ.

ಆರೋಗ್ಯದ ಕಾಳಜಿ ಇಲ್ಲದ ಸಾರ್ವಜನಿಕರು, ನಿಯಮ ಪಾಲನೆ ಮಾಡದೆ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಹುಬ್ಬಳ್ಳಿಯ ನಗರ ಸಾರಿಗೆ ಬಸ್ ಗಳಲ್ಲಿ ಸಾಮಾಜಿಕ ಅಂತರ ಮಾಯಾವಾಗಿದೆ. ಬಸ್ ತುಂಬ ಜನರನ್ನ ತುಂಬಿಕೊಂಡು ಸಂಚಾರ ನಡೆಸುತ್ತಿವೆ. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಜನರು ಕೊರೋನಾ ಭಯವನ್ನು ಮರೆತು ಬಾಗಿಲಿಗೆ ಜೋತು ಬಿದ್ದು ಹೋಗುತ್ತಿರುವ ಘಟನೆಯೊಂದು ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ನಡೆದಿದೆ.

ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಲೆಕ್ಕಕ್ಕೆ ಸಿಗದ ರೀತಿಯಲ್ಲಿ ಮುನ್ನುಗ್ಗುತ್ತಿದ್ದರೂ ಕೂಡ ಜನರು ಮಾತ್ರ ಯಾವುದಕ್ಕೂ ಕ್ಯಾರೇ ಎನ್ನದೇ ಸಂಚರಿಸುತ್ತಿದ್ದಾರೆ. ಇನ್ನೂ ಒಂದು ಬಸ್ಸಿನಲ್ಲಿ ಕೇವಲ ಮೂವತ್ತು ಜನರು ಮಾತ್ರ ಪ್ರಯಾಣಿಸಬೇಕು ಎಂದು ಸೂಚನೆ ನೀಡಿದ್ದರೂ ಕೂಡ ಬೇಕಾಬಿಟ್ಟಿಯಾಗಿ ಪ್ರಯಾಣಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹಲವಾರು ಬಾರಿ ಮಾಧ್ಯಮಗಳು ವರದಿ ಮಾಡಿದರು‌ ಕೂಡ ಸಾರ್ವಜನಿಕರು ಜಾಗೃತರಾಗುತ್ತಿಲ್ಲ. ಕೂಡಲೇ ಜಿಲ್ಲಾಡಳಿತ ಸೂಕ್ತ ಕ್ರಮವನ್ನು ಜರುಗಿಸಬೇಕಿದೆ.

Exit mobile version