Site icon PowerTV

ಯಾವುದೇ ಕಾರಣಕ್ಕೂ ಸಾರಿಗೆ ಸಿಬ್ಬಂದಿಗಳ ವೇತನ ತಡೆಹಿಡಿಯಲ್ಲ : ಸಾರಿಗೆ ಸಚಿವ ಸವದಿ

ಚಿಕ್ಕೋಡಿ : ಸಾರಿಗೆ ಇಲಾಖೆಯು 2,652 ಕೋಟಿ ನಷ್ಟವನ್ನು ಅನುಭವಿಸುತ್ತಿದೆ. ಆದರೂ ನಮ್ಮ‌ ಇಲಾಖೆ 1 ಲಕ್ಷ 30 ಸಾವಿರ ಸಿಬ್ಬಂದಿಗೆ ವೇತನ ನೀಡಲು ತೀರ್ಮಾನಿಸಿದ್ದೇವೆ ಎಂದು ನಿಪ್ಪಾಣಿಯಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ ಸವದಿ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳಿಗೆ ಯಾವುದೇ ಕಾರಣಕ್ಕೂ ಸಂಬಳ ತಡೆ ಹಿಡಿಯುವುದಿಲ್ಲ.. ಸಾರಿಗೆ ಸಿಬ್ಬಂದಿಗೆ ವೇತನ ರಹಿತ ರಜೆಯನ್ನು ಪಡೆಯುವಂತೆ ಒತ್ತಾಯ ಮಾಡುತ್ತಿಲ್ಲ, ಯಾವುದೇ ಕಾರಣಕ್ಕೂ ಸಿಬ್ಬಂದಿಯ ವೇತನವನ್ನು ಸರ್ಕಾರ ತಡೆ ಹಿಡಿಯಲ್ಲ. ಪ್ರತಿ ತಿಂಗಳು 126 ಕೋಟಿ ಸಿಬ್ಬಂದಿ ವೇತನವನ್ನು ನೀಡಬೇಕಾಗುತ್ತದೆ. ಮುಖ್ಯಮಂತ್ರಿಗಳು 326 ಕೋಟಿ ನೀಡಿದ್ದು, ಸಿಬ್ಬಂದಿಗಳ ಈವರೆಗೆ 2 ತಿಂಗಳ ವೇತನ ನೀಡಲಾಗಿದೆ ಎಂದು ಹೇಳಿದರು.

Exit mobile version