Site icon PowerTV

 ಬಿಎಸ್​ವೈಗೆ ಕೊರೋನಾ ಕಾಟ, ಸೆಲ್ಫ್​ ಕ್ವಾರಂಟೀನ್​ ಗೆ ಒಳಗಾದ ಸಿಎಂ

ಬೆಂಗಳೂರು :  ಸಿಎಂಗೂ  ಕೂಡ  ಕೊರೋನಾ ಸೋಂಕಿನ ಕಾಟ ಬಿಟ್ಟಿಲ್ಲ. ಬಿಎಸ್​​ವೈ ನಿವಾಸಕ್ಕೂ ವೈರಸ್ ಎಂಟ್ರಿ ಕೊಟ್ಟಿದ್ದು ಇದೀಗ ಸಿಎಂ ಸೆಲ್ಫ್ ಕ್ವಾರಂಟೀನ್ ಗೆ ಒಳಗಾಗಿದ್ದಾರೆ.

ಸಿಎಂ ಕಾರು ಚಾಲಕ, ಬೆಂಗಾವಲು ಪಡೆ ಸೇರಿದಂತೆ ನಿಕಟ ಸಂಪರ್ಕದಲ್ಲಿದ್ದ ಮೂವರಿಗೆ ಸೋಂಕು ದೃಡಪಟ್ಟಿದ್ದು ಇದೀಗ ಸಿಎಂಗೆ ಟೆಂಕ್ಷನ್ ಶುರುವಾಗಿದೆ. ಸದ್ಯಕ್ಕೆ ಸಿಎಂ ಕ್ವಾರಂಟೀನ್ ಗೆ ಒಳಗಾಗಿದ್ದಾರೆ ಅಲ್ಲದೆ ಸಿಎಂ ಅವರ ಎಲ್ಲಾ ಮೀಟಿಂಗ್ ಗಳನ್ನು ಸಹ ಕ್ಯಾಂಸಲ್ ಮಾಡಲಾಗಿದ್ದು ಮನೆ ಬಳಿ ಸ್ಯಾನಿಟೈಸ್ ಮಾಡಿಸಲಾಗುತ್ತಿದೆ. ಇನ್ನು ಸಿಎಂ ಭೇಟಿ ಬಳಿಕ ಮಾತನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಸಿಎಂ ಆರೋಗ್ಯವಾಗಿದ್ದಾರೆ. ಆರೋಗ್ಯದಲ್ಲಿ ಯಾವುದೇ ಏರು ಪೇರಾಗಿಲ್ಲ ಎಂದು ತಿಳಿಸಿದ್ದಾರೆ.

Exit mobile version