Site icon PowerTV

ಐಸೊಲೆಷನ್ ವಾರ್ಡ್‌ನಲ್ಲಿದ್ದ ವ್ಯಕ್ಯಿ ಆತ್ಮಹತ್ಯೆ..!

ಉಡುಪಿ : ಉಡುಪಿ ಜಿಲ್ಲಾಸ್ಪತ್ರೆಯ ಐಸೋಲೇಶನ್ ವಾರ್ಡ್‌ನಲ್ಲಿದ್ದ ಶಂಕಿತ ಕೊರೋನಾ ರೋಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರನ್ನು ಪ್ರಭಾಕರ್ ಪುತ್ರನ್ (63) ಎಂದು ಗುರುತಿಸಲಾಗಿದೆ. ಜುಲೈ 5ರಂದು ಇವರು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಇವರ ಗಂಟಲ ದ್ರವ ತಪಾಸಣೆಗೆ ವೈದ್ಯರು ಪಡೆದಿದ್ದರು. ಹೆಚ್ಚಿನ ಮುಂಜಾಗ್ರತೆಯ ಹಿನ್ನಲೆಯಲ್ಲಿ ಪ್ರಭಾಕರ್ ಪುತ್ರನ್ ಅವರನ್ನು ಐಸೋಲೇಶನ್ ವಾರ್ಡ್‌ನಲ್ಲಿರಿಸಲಾಗಿತ್ತು. ಆದರೆ ವರದಿ ಕೈ ಸೇರುವ ಮುನ್ನವೇ ಕೊರೋನಾ ಭಯದಿಂದ ಪ್ರಭಾಕರ್ ಪುತ್ರನ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಯ ಬಳಿಕ ಕೊರೋನಾ ಟೆಸ್ಟ್ ವರದಿ ನೆಗೆಟಿವ್ ಬಂದಿದೆ. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

Exit mobile version