Site icon PowerTV

ಸದ್ಯಕ್ಕೆ ಶಾಲೆ ಆರಂಭದ ಮಾತೇ ಇಲ್ಲ : ಸುರೇಶ್ ಕುಮಾರ್

ಬೆಂಗಳೂರು : ನಿನ್ನೆಯಿಂದಲೂ ಆಗಸ್ಟ್ ನಿಂದ ಶಾಲೆಗಳು ಓಪನ್ ಆಗಲಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಒಂದು ಕಡೆ ಕೊರೋನಾ ಮಹಾಮಾರಿ ಜನರ ಜೀವನದ ಜೋತೆ ಆಟವಾಡುತ್ತಿದೆ. ಮತ್ತೊಂದು ಕಡೆ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಪೊಷಕರು ಹೆದರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶಾಲೆಗಳು ಮತ್ತೆ ಓಪನ್ ಆಗಬಹುದು ಎಂಬ ಮಾಹಿತಿಯಿಂದ ಪೊಷಕರು ಕಂಗಾಲಾಗಿದ್ದರು.  ಆದ್ರೆ ಇದಕ್ಕೆಲ್ಲ ಈಗ ಶಿಕ್ಷಣ ಸಚಿವರು ತೆರೆ ಎಳೆದಿದ್ದಾರೆ.

‘’ಶಾಲೆ ಆರಂಭ ಅನ್ನೋದು  ಊಹಾಪೋಹವಷ್ಟೆ,ಸರ್ಕಾರಕ್ಕೆ ವಿದ್ಯಾರ್ಥಿಗಳ ಆರೋಗ್ಯವೇ ಮುಖ್ಯ ಪೋಷಕರು, ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಬೇಡಿ ಸದ್ಯಕ್ಕೆ ಯಾವುದೇ ಕಾರಣಕ್ಕು  ಶಾಲೆಗಳು ಓಪನ್ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

Exit mobile version