Site icon PowerTV

ಮಲೇಷಿಯಾದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಭಾರತೀಯ ಯುವಕ | 6 ತಿಂಗಳ ನಂತರ ಹುಟ್ಟೂರಿಗೆ ಬಂದ ಮೃತದೇಹ.

ಮೈಸೂರು : ಮಲೇಷಿಯಾದಲ್ಲಿ ಭಾರತೀಯ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಸಾವನ್ನಪ್ಪಿದ 6 ತಿಂಗಳ ನಂತರ ಮೃತದೇಹ ಹುಟ್ಟೂರಿಗೆ ತಲುಪಿದೆ. ಮೈಸೂರು ಜಿಲ್ಲೆ ಪಿರಿಯಾಟ್ಟಣಕ್ಕೆ ಮೃತದೇಹ ತಲುಪಿದ್ದು ಅಂತ್ಯಕ್ರಿಯೆ ನೆರವೇರಿದೆ. ಡಿಸೆಂಬರ್‌ನಲ್ಲಿ ಸಾವನ್ನಪ್ಪಿದ ಯುವಕ ಸುಮಂತ್(22) ಮೃತದೇಹ ನೆನ್ನೆ ಸ್ವಂತ ಊರಾದ ಪಿರಿಯಾಪಟ್ಟಣಕ್ಕೆ ಬಂದಿದೆ.

ಮಲೇಷಿಯಾದಲ್ಲಿ ಡಿಸೆಂಬರ್ ತಿಂಗಳಲ್ಲಿ ನಿಗೂಢವಾಗಿ ಮೃತಪಟ್ಟಿದ್ದ ಸುಮಂತ್(22).

ಕೆಲಸಕ್ಕಾಗಿ ಮಲೇಷಿಯಾಕ್ಕೆ ತೆರಳಿದ್ದ ಸುಮಂತ್ ವಂಚನೆಗೆ ಒಳಗಾಗಿದ್ದ. 35 ಸಾವಿರ ರೂ. ಸಂಬಳ ಕೊಡಿಸುವುದಾಗಿ ನಂಬಿಸಿ ಕರೆದೊಯ್ದಿದ್ದ ಮಧ್ಯವರ್ತಿ. ಆದರೆ ಕೇವಲ 18 ಸಾವಿರ ರೂ. ಕೆಲಸ ಕೊಡಿಸಿ ವಂಚನೆ ಮಾಡಿದ್ದಾನೆ.
ಇದರಿಂದ ಮನನೊಂದ ಸುಮಂತ್ ವಾಪಸ್ಸು ಬರಲು ಸಿದ್ದತೆ ನಡೆಸಿದ್ದ ಎಂದು ಹೇಳಲಾಗಿದೆ. ನೌಕಾಪಡೆಯಲ್ಲಿ ಕೆಲಸ ಕೊಡಿಸುವುದಾಗಿ ಕರೆದೊಯ್ದು ಮತ್ತೊಂದು ವಿಭಾಗದಲ್ಲಿ ಕೆಲಸ ಕೊಡಿಸಿದ್ದ ಕಾರಣ ಸುಮಂತ್ ಬೇಸತ್ತಿದ್ದನೆಂದು ಹೇಳಲಾಗಿದೆ. 2019 ಡೆಸೆಂಬರ್ 14 ರಂದು ಸುಮಂತ್ ಕೆಲಸ ನಿರ್ವಹಿಸುತ್ತಿದ್ದ ಸ್ಥಳದಿಂದ ನಾಪತ್ತೆಯಾಗಿದ್ದ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು. ಎರಡು ದಿನಗಳ ನಂತರ ಸಮುದ್ರದಲ್ಲಿ ಮೃತ ದೇಹ ಪತ್ತೆಯಾಗಿದೆ. ಸಹದ್ಯೋಗಿಗಳಿಂದ ಸುಮಂತ್ ಮೃತಪಟ್ಟಿರುವುದು ಕುಟುಂಬದವರಿಗೆ ಮಾಹಿತಿ ತಲುಪಿದೆ. ಸಾವಿನ ಬಗ್ಗೆ ತನಿಖೆ ನಡೆಸುವಂತೆ ಹಾಗೂ ಶವ ವಾಪಸ್ ತರಿಸಿಕೊಳ್ಳಲು ಸಂಸದ ಪ್ರತಾಪ್‌ಸಿಂಹ‌ಗೆ ಪೋಷಕರು ಮನವಿ ಮಾಡಿದ್ದರು. ಭಾರತದ ರಾಯಭಾರಿ ಕಚೇರಿಗೆ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದರು. ಕರೊನಾ ಲಾಕ್‌ಡೌನ್ ಕಾರಣ ಮೃತದೇಹ ಭಾರತಕ್ಕೆ ತಲುಪಲು ತಡವಾಗಿದೆ.ಆರು‌ ತಿಂಗಳ ಬಳಿಕ ಸುಮಂತ್ ಮೃತದೇಹ ಪಿರಿಯಾಪಟ್ಟಣ ತಲುಪಿದೆ. ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಕುಟುಂಬಸ್ಥರು ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ..

Exit mobile version