Site icon PowerTV

ದೇವಾಲಯ ಪ್ರವೇಶಕ್ಕೆ ತಡೆದ ಎಎಸ್ಐ ಜೊತೆ ಪೊಲೀಸಪ್ಪನ ಮಾತಿನ ಚಕಮಕಿ

ಹುಬ್ಬಳ್ಳಿ : ಕೊರೊನಾ ಭೀತಿ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಗಾಳಿ ದುರ್ಗಮ್ಮ ದೇವಿ ಜಾತ್ರೆಯನ್ನು ಜಿಲ್ಲಾಡಳಿತ ರದ್ದು ಮಾಡಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರನ್ನು ಬ್ಯಾರಿಕೆಡ್ ಹಾಕಿ ತಡೆಯಲಾಗಿದೆ. ಆದ್ರೆ
ಕೇಶ್ವಾಪುರ ಪೊಲೀಸ್ ಠಾಣೆಯ ಕಾನ್ಸಟೇಬಲ್ ಒಬ್ಬರು ಜಿಲ್ಲಾಡಳಿತದ ಆದೇಶ ದಿಕ್ಕರಿಸಿ ದೇವಾಲಯ ಪ್ರವೇಶಕ್ಕೆ ಯತ್ನಿಸಿದ್ದಾರೆ. ಆಗ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಒಳಗೆ ಹೋಗದಂತೆ ತಡೆದಿದ್ದಾರೆ. ಆದ್ರೆ ಅವರಿಗೆ ದಬಾಯಿಸಿದ ಗುಳೇಶ್ ಮಹಿಳಾ ಸಿಬ್ಬಂದಿ ಮಾತು ದಿಕ್ಕರಿಸಿ ಬ್ಯಾರಿಕೆಡ್ ತಗೆದು‌ ಒಳ ಹೋಗಲು ಮುಂದಾದಾಗ ಅಲ್ಲೆ ಇದ್ದ ಎಎಸ್ಐ ಒಳಗೆ ಹೋಗದಂತೆ ತಡೆದರು. ಆಗ ಎಎಸ್ಐ ಹಾಗೂ ಪೊಲೀಸ್ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ‌ಗುಳೇಶ್ ಹೊರಗಡೆ ಕೈ ಮುಗಿದು ಮರಳಿದರು.

Exit mobile version