Site icon PowerTV

ಕುಣಿಗಲ್ ಶಾಸಕ ಡಾ.ರಂಗನಾಥ್ ಕ್ವಾರಂಟೈನ್..!

ತುಮಕೂರು: ಜಿಲ್ಲೆಯ ಕುಣಿಗಲ್ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ರಂಗನಾಥ್’ರನ್ನ ಹೋಂ ಕ್ವಾರಂಟೈನ್ ಮಾಡಲಾಗಿದೆ. ನಿನ್ನೇ ಕುಣಿಗಲ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸಂಪರ್ಕ ಹೊಂದಿದ್ದರು ಎಂಬ ಕಾರಣಕ್ಕೆ ಶಾಸಕರನ್ನ ಹೋಂ ಕ್ವಾರಂಟೈನ್ ಮಾಡಲಾಗಿದೆ. ಇತ್ತಿಚೆಗಷ್ಟೇ ಪೊಲೀಸ್ ಇಲಾಖೆಯೊಂದಿಗೆ ಶಾಸಕ ಡಾ.ಕೆ.ರಂಗನಾಥ್ ಸಭೆ ನಡೆಸಿದ್ದರು ಎನ್ನಲಾಗಿದ್ದು, ನಿನ್ನೇ ಕುಣಿಗಲ್ ಪೊಲೀಸ್ ಠಾಣೆ ಸೀಲ್ ಡೌನ್ ಆದ ಬಳಿಕ ಹೆಡ್ ಕಾನ್ಸ್‌ಟೇಬಲ್ ಸಂಪರ್ಕ ಹೊಂದಿದ್ದ ಬಹುತೇಕ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿತ್ತು, ಅವರೊಂದಿಗೆ ಸಭೆ ನಡೆಸಿದ್ದ ಕುಣಿಗಲ್ ಶಾಸಕ ಡಾ.ಕೆ.ರಂಗನಾಥ್ ಕೂಡ ಬೆಂಗಳೂರಿನ ಅವರ ನಿವಾಸದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇನ್ನೂ ಡಾ ಕೆ.ರಂಗನಾಥ್ ಇನ್ನೂ ಮುಂದಿನ ಹದಿನೈದು ದಿನಗಳ ಕಾಲ ಸಾರ್ವಜನಿಕ ಸಭೆ ಸಮಾರಂಭ ಭೇಟಿ ಕಾರ್ಯಕ್ರಮಗಳನ್ನು ನಡೆಸುವುದಿಲ್ಲ, ಜನತೆ ಸಹಕರಿಸಬೇಕಾಗಿ ತಮ್ಮ ಫೇಸ್ ಬುಕ್ ಫೇಜ್ ನಲ್ಲಿ ಮನವಿ ಮಾಡಿದ್ದಾರೆ.

ಹೇಮಂತ್ ಕುಮಾರ್. ಜೆ.ಎಸ್ ಪವರ್ ಟಿವಿ ತುಮಕೂರು.

Exit mobile version